ಯತ್ನಾಳ ಪರ ಬೆಲ್ಲದ್ ಬ್ಯಾಟಿಂಗ್

0
21
ಅರವಿಂದ ಬೆಲ್ಲದ

ಧಾರವಾಡ: ಯತ್ನಾಳ್ ಅತ್ಯಂತ ಜನಪ್ರಿಯ ನಾಯಕ. ಹಿಂದುತ್ವ ಪ್ರತಿಪಾದಕರು ಅವರು. ಅವರ ಮೇಲೆ ಜನರ ಪ್ರೀತಿ ಇದೆ, ಆದರೂ ಅವರಿಗೆ ಸ್ಥಾನ ಕೊಟ್ಟಿಲ್ಲ. ಆದ್ರೆ ಮುಂದೆ ಒಳ್ಳೆ ಸ್ಥಾನ ಅವರಿಗೆ ಸಿಗಲಿದೆ ಎನ್ನುವ ಭರವಸೆ ಇದೆ. ಅವರಿಗೆ ಪಕ್ಷ ಉತ್ತಮ ಸ್ಥಾನ ಕೊಡುತ್ತದೆ ಅವರನ್ನ ಯಾರೂ ಕಡೆಗಣನೆ ಮಾಡುತ್ತಿಲ್ಲ ಎಂದು ಯತ್ನಾಳ್‌ರ ಪರ ಶಾಸಕ ಅರವಿಂದ ಬೆಲ್ಲದ್ ಬ್ಯಾಟ್ ಬೀಸಿದ್ದಾರೆ.
ವಿಧಾನಸಭೆ ವಿಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ಕೊಟ್ಟ ಜವಾಬ್ದಾರಿ ಜನರ ಆಶೋತ್ತರಗಳಿಗೆ ಧ್ವನಿಯಾಗಿ ಜವಾಬ್ದಾರಿ ನಿರ್ವಹಿಸುವೆ. ಉತ್ತರ ಕರ್ನಾಟಕದ ಧ್ವನಿಯಾಗಿ ಪಕ್ಷ ಈ ಸ್ಥಾನ ನೀಡಿದೆ. ಪಕ್ಷದ ನಾಯಕರಿಗೆ ವಂದನೆ ಸಲ್ಲಿಸುವೆ. ವಿರೋಧ ಪಕ್ಷದಲ್ಲಿದ್ದು ಸರ್ಕಾರದ ಕೆಲಸ ಸರಿಯಾಗಿ ಮಾಡಿಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.

Previous articleಮಾಲಾಧಾರಿಗಳ ಶೋಭಾಯಾತ್ರೆ ಶಾಂತಿಯುತ ತೆರೆ
Next articleಕ್ರಿಸ್ಮಸ್ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು