ಕೊಪ್ಪಳ: ಟಿಪ್ಪು ಸುಲ್ತಾನ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆದಿದೆ.
ಶಹೀದ್ ಅಸ್ಫಕ್ ವುಲ್ಲಾ ಕಮಿಟಿ ಮತ್ತು ನವ ಜವಾನ್ ಕಮಿಟಿಯ ನೇತೃತ್ವದಲ್ಲಿ ಮುಸ್ಲಿಂ ಸಮಾಜದವರು ನಗರದ ಅಶೋಕ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಎರಡು ಸಂಘಟನೆಗಳ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ಯತ್ನಾಳ ವಜಾಗೊಳಿಸಬೇಕು ಎಂದು ಒತ್ತಾಯಿಸಿ ನಗರದ ತಹಶೀಲ್ದಾರ್ ಮೂಲಕ ರಾಜ್ಯಪಾಲಕರಿಗೆ ಮನವಿ ಸಲ್ಲಿಸಿದರು. ನಾಸೀರ್ ಹುಸೇನಿ, ಅಲೀಂ ಖಾದ್ರಿ, ಆಫೀಸ್ ಅಲಿ ಮೌಲನಾ ಸೇರಿ ಇತರರು ಇದ್ದರು.