ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬ ಮೌಲ್ವಿಯಾಗಿ ಇಂದಿನ ಬಜೆಟ್ ಮಂಡಿಸಿದ್ದಾರೆ. ಕೇವಲ ಮುಸ್ಲಿಮರನ್ನು, ಮೌಲ್ವಿಗಳನ್ನು ಆರ್ಥಿಕವಾಗಿ ಬೆಳೆಸುವ ಬಜೆಟ್ ಮಂಡಿಸಿದ್ದಾರೆ ಎಂದು ಕೇಂದ್ರದ ಮಾಜಿ ಮಂತ್ರಿ ಭಗವಂತ ಖೂಬಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯನವರ ಬುರುಡೆಯಲ್ಲಿ ಮುಸ್ಲಿಮ್‌ರಿಗೆ ಮಾತ್ರ ಸರ್ಕಾರದ ಸಂಪನ್ಮೂಲ ಒದಗಿಸುವ ಉದ್ದೇಶ ಹೊಂದಿರುವುದು ಕಾಣುತ್ತಿದೆ. ಅತಿ ಹೆಚ್ಚು ತೆರಿಗೆ ಕಟ್ಟುವ ಉಳಿದ ಸಮಾಜದವರನ್ನು ನಿರ್ಲಕ್ಷಿಸಿ, ತೆರಿಗೆ ಕಟ್ಟುವವರ ಸಂಪತ್ತು ಮುಸ್ಲಿಮ್‌ರಿಗೆ ನೀಡುವ ಉದ್ದೇಶ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.