ಕಾಂಗ್ರೆಸ್‌ನವರು ಸೈನ್ಯವನ್ನು ಟೀಕೆ ಮಾಡುತ್ತಿಲ್ಲ
ಮಂಗಳೂರು: ಕಾಂಗ್ರೆಸ್‌ನವರು ಸೈನ್ಯವನ್ನು ಟೀಕೆ ಮಾಡುತ್ತಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ , ಬಿಜೆಪಿಯ ಮಂತ್ತಿ ಸೋಫಿಯ ಖುರೇಷಿ ಬಗ್ಗೆ ಮಾತನಾಡಿದ್ದನ್ನು ನೋಡಿ, ಕೋರ್ಟ್‌ನಿಂದ ಎಫ್ ಐಆರ್ ಆಗುವ ಸನ್ನಿವೇಶ ಬಂದಿದೆ. ಪೆಹಾಲ್ಕಮ್‌ನಲ್ಲಿ ಗಂಡಂದಿರನ್ನು ಕಳೆದುಕೊಂಡವರೇ ಇದನ್ನು ಹಿಂದೂ ಮುಸ್ಲಿಂ ಮಾಡಬೇಡಿ ಎಂದಿದ್ದಾರೆ. ಬಿಜೆಪಿಯ ಕಾರ್ಯಕರ್ತರಿಗೆ ಕೇವಲ ಈ ಪ್ರಕರಣವನ್ನು ಹಿಂದೂ ಮುಸ್ಲಿಂ ಮಾಡಬೇಕಿದೆ. ಬಿಜೆಪಿ ಕಾರ್ಯಕರ್ತರು ನಮ್ಮ ವಿದೇಶಾಂಗ ಕಾರ್ಯದರ್ಶಿ ಮಗಳಿಗೆ ಏನೆಲ್ಲ ಟೀಕೆ ಮಾಡಿದ್ದರು ಎಂದರು. ಕದನ ವಿರಾಮ ಘೋಷಣೆ ಮಾಡಿದ ಪ್ರಧಾನಿಯನ್ನು ಟ್ರೋಲ್ ಮಾಡಬೇಕಿತ್ತು. ಪ್ರಧಾನಿಯವರ ಒಪ್ಪಿಗೆ ಇಲ್ಲದೆ ಕದನ ವಿರಾಮ ಘೋಷಣೆ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಸ್ಪಷ್ಟವಾದ ವಿಚಾರವನ್ನು ರಾಜಕೀಯ ಮಾಡದೆ ಹೇಳಬೇಕು. ಪಾಕಿಸ್ತಾನದವರು ನಮ್ಮ ಐದು ಜೆಟ್ ಗಳನ್ನು ಹೊಡೆದು ಹಾಕಿದ್ದೇವೆ ಎಂದಿದ್ದಾರೆ. ಇದಕ್ಕೆ ಉತ್ತರ ಕೊಡಲು ಮೋದಿ ತಯಾರಿಲ್ಲ, ಪಹಲ್ಗಾಮ್‌ನಲ್ಲಿ ನರಮೇಧ ಮಾಡಿದವರನ್ನು ಹುಡುಕಿ ಮಣ್ಣುಪಾಲು ಮಾಡುತ್ತೇವೆ ಎಂದರು. ನಾವೆಲ್ಲಾ ಪ್ರಧಾನಿಗಳ ಜೊತೆ ನಿಂತುಕೊಂಡೆವು. ಟ್ರಂಪ್ 20 ಸಲ ಮೀಡಿಯಾ ಮುಂದೆ ಬರುತ್ತಾರೆ, ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುತ್ತಾರೆ. ಆದರೆ ನಮ್ಮ ಪ್ರಧಾನಿಗಳಿಗೆ ಯಾರು ಪ್ರಶ್ನೆಗಳನ್ನು ಕೇಳಲು ಆಗುವುದಿಲ್ಲ. ಅವರಿಗೆ ಪತ್ರಕರ್ತರು ಎಂದರೆ ಕ್ಯಾರೆ ಇಲ್ಲ. ಸರ್ವ ಪಕ್ಷದ ಸಭೆ ಕರೆದು ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಮೋದಿ ಹೇಳಿದ್ದೆಲ್ಲಾ ವೇದ ವಾಕ್ಯ ಎಂದು ನಾವು ನಂಬಬೇಕಾ? ಇಡೀ ದೇಶದಲ್ಲಿ ಅತೀ ದೊಡ್ಡ ಸುಳ್ಳುಗಾರ ಮೋದಿ. ಸುಳ್ಳಿನ ಆಧಾರದಲ್ಲಿ ದಂತ ಕಥೆ ಹೇಳುವುದಲ್ಲಿ ಮೋದಿ ನಿಸ್ಸಿಮರು. ನಮಗೆ ನಂಬಿಕೆ ಬರುವಂತೆ ಉತ್ತರ ನೀಡಲಿ. ಅಧಿವೇಶನ ಕರೆಯಬೇಕೆಂದು ಎಂದು ನಮ್ಮ ಮುಖಂಡರು ಹೇಳಿದ್ದಾರೆ, ಅದನ್ನ ಮೊದಲು ಮಾಡಲಿ ಎಂದರು.