ಮೋದಿ ಸರ್ಕಾರ ರೈತರ ಪಾಲಿಗೆ ಶಾಪ

0
16

ಬೆಂಗಳೂರು: ಮೋದಿ ಸರಕಾರ ದೇಶದ ರೈತರಿಗೆ ಶಾಪವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಸರ್ಕಾರ ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ ಎಂದು ಖರ್ಗೆ ಆರೋಪಿಸಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಹಕ್ಕನ್ನು ಕಾಂಗ್ರೆಸ್ ಪಕ್ಷ ಮಾತ್ರ ನೀಡಬಲ್ಲದು ಎಂದು ಖರ್ಗೆ ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು
“ದೇಶದ ಅನ್ನ ನೀಡುವ ರೈತರಿಗೆ ಮೋದಿ ಸರಕಾರ ಶಾಪವಾಗಿದೆ. ನಿರಂತರ ಸುಳ್ಳು ‘ಮೋದಿ ಗ್ಯಾರಂಟಿ’ಯಿಂದಾಗಿ ಈ ಮೊದಲು 750 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇದೀಗ ನಿನ್ನೆ 1 ರೈತ ಹುತಾತ್ಮರಾಗಿದ್ದು, 3 ಜನ ರಬ್ಬರ್ ಬುಲೆಟ್ ನಿಂದ ಕಣ್ಣು ಕಳೆದುಕೊಂಡಿದ್ದಾರೆ, ಮೋದಿ ಸರ್ಕಾರ ರೈತರನ್ನು ಶತ್ರುಗಳಂತೆ ನಡೆಸಿಕೊಂಡಿದೆ, ಕಾಂಗ್ರೆಸ್ ಮಾತ್ರ ಅವರಿಗೆ ಎಂಎಸ್‌ಪಿಯ ಕಾನೂನುಬದ್ಧ ಹಕ್ಕನ್ನು ನೀಡುತ್ತದೆ! ಎಂದು ಬರೆದುಕೊಂಡಿದ್ದಾರೆ.

Previous articleನ್ಯಾಯಲಯಕ್ಕೆ ಹಾಜರಾದ ಸಿಎಂ
Next articleಇಂದು ರಾಜ್ಯಾದ್ಯಂತ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ