ಮೊದಲ ಎಲಿಮೆಂಟ್ ಅಳವಡಿಕೆ ಆರಂಭ

0
22

ಬಳ್ಳಾರಿ: ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್‌ಗೇಟ್‌ನ ಮೊದಲ ಎಲಿಮೆಂಟ್ ಅಳವಡಿಸುವ ಕಾರ್ಯಕ್ಕೆ ಈಗ ಚಾಲನೆ ನೀಡಲಾಗಿದೆ.
ಎರಡು ಬೃಹತ್ ಕ್ರೇನ್‌ಗಳ ಮೂಲಕ ಮೊದಲ ಎಲಿಮಿಂಟ್ ೧೯ನೇ ಕ್ರಸ್ಟ್‌ಗೇಟ್‌ನ ಹರಿಯುವ ನೀರಲ್ಲಿ ಇಳಿಸುವ ಸಾಹಸ ಕೆಲಸ ನಡೆದಿದೆ. ಮೊದಲ ಎಲಿಮೆಂಟ್ ಅಳವಡಿಸಿದರೆ ಉಳಿದ ನಾಲ್ಕು ಎಲಿಮೆಂಟ್ ಇಳಿಕೆ ಕೆಲಸ ಸುಲಭವಾಗಲಿದೆ.
ಗೇಟ್ ಅಳವಡಿಕೆ ಕಾರ್ಯ ಆರಂಭಿಸಿದ್ದರಿಂದ ಏನೇ ಅವಘಡ ಸಂಭವಿಸಿದರೂ ಸುರಕ್ಷತಾ ಕ್ರಮ ಕೈಗೊಳ್ಳಲು ರಾಜ್ಯ ಎನ್‌ಸಿಆರ್‌ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಡ್ಯಾಂ ಮುಂಭಾಗದಲ್ಲಿ ನೇಮಿಸಲಾಗಿದೆ. ಎರಡು ಬೋಟ್ ಸಹಿತ ಎನ್‌ಡಿಆರ್‌ಎಫ್ ಸಿಬ್ಬಂದಿ ಜಲಾಶಯದ ಮುಂಭಾಗದಲ್ಲಿ ಇದ್ದಾರೆ.

Previous articleಸ್ವಾತಂತ್ರ್ಯ ದಿನಾಚರಣೆ: ನೆಲದ ಮೇಲೆ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Next articleದೇಶದ ರಕ್ಷಣೆ-ಏಕತೆ ನಮ್ಮೆಲ್ಲರ ಹೊಣೆ