ಸಂ.ಕ. ಸಮಾಚಾರ ಮೈಸೂರು
ಮಂಗಳವಾರ ಪ್ರಕಟವಾದ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ನಗರದ ಮೂವರು ಉತ್ತಮ ರ್‍ಯಾಂಕ್ ತಮ್ಮದಾಗಿಸಿಕೊಳ್ಳುವ ಮೂಲಕ ನಗರಕ್ಕೆ ಹೆಮ್ಮೆ ತಂದಿದ್ದಾರೆ.
ಭಾನುಪ್ರಕಾಶ್ ೫೨೩ ನೇ ರ್‍ಯಾಂಕ್, ಎ.ಸಿ.ಪ್ರೀತಿ ೨೬೩ನೇ ರ್‍ಯಾಂಕ್ ಹಾಗೂ ರಶ್ಮಿಗೆ ೯೭೬ನೇ ರ್‍ಯಾಂಕ್‌ನಲ್ಲಿ ಉತ್ತೀರ್ಣರಾಗುವ ಮೂಲಕ ವಿವಿಧ ಸೇವೆಗೆ ಆಯ್ಕೆಯಾಗುವ ಅರ್ಹತೆ ಪಡೆದಿದ್ದಾರೆ.
ಭಾನುಪ್ರಕಾಶ್ ಕೃಷಿಕರಾದ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿ ಪುತ್ರ. ಇವರಿಗೆ ಕರ್ನಾಟಕ ಕೇಡರ್‌ನಲ್ಲಿ ಐಪಿಎಸ್ ಹುದ್ದೆ ಲಭಿಸಲಿದೆ.
ಎ.ಸಿ. ಪ್ರೀತಿ ಸಾಲಿಗ್ರಾಮ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ಕೃಷಿಕರಾದ ಚನ್ನಬಸಪ್ಪ, ನೇತ್ರಾವತಿ ದಂಪತಿ ಪುತ್ರಿ. ೩ನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಜಿ. ರಶ್ಮಿ ಕನಕದಾಸ ನಗರದ ಗಂಗರಾಮ್ ಹಾಗೂ ರತ್ಮಮ್ಮ ದಂಪತಿ ಪುತ್ರಿ. ಪದವಿ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಾರೆ. ೨೦೨೨ರಲ್ಲಿ ಐಎಫ್‌ಎಸ್ ಪರೀಕ್ಷೆ ಉತ್ತೀರ್ಣರಾಗಿದ್ದು, ಸದ್ಯ ಒಡಿಶಾ ರಾಜ್ಯದ ಖೊರ್ದಾ ಜಿಲ್ಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾರೆ. ಇದೀಗ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ೯೭೬ನೇ ರ್‍ಯಾಂಕ್ ಬಂದಿದೆ. ಆದರೂ ಐಎಫ್‌ಎಸ್ ಅಲ್ಲೇ ಮುಂದುವರಿಯುವ ನಿರ್ಧಾರ ಮಾಡಿದ್ದಾರೆ.