ಧಾರವಾಡ(ಕುಂದಗೋಳ): ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ರೈತರು ಶೇಖರಣೆ ಮಾಡಿಟ್ಟಿದ್ದ ಮೇವಿನ ತಗಡಿನ ಶೆಡ್‌ಗೆ ಬೆಂಕಿ ತಗುಲಿ ಮೇವು ಹಾನಿಯಾದ ಘಟನೆ ನಡೆದಿದೆ.
ರೊಟ್ಟಿಗವಾಡ ಗ್ರಾಮದ ದ್ಯಾಮಣ್ಣ ಕಲಬಾರ ಹಾಗೂ ಬಸಪ್ಪ ಕಬ್ಬೆಳ್ಳಿ ಎಂಬ ರೈತರು ಶೇಖರಣೆ ಮಾಡಿದ್ದ ಮೇವು ಸುಟ್ಟಿದೆ. ಅಂದಾಜು ೧ ಲಕ್ಷಕ್ಕೂ ಹೆಚ್ಚು ಮೊತ್ತದ ಮೇವು ಸುಟ್ಟು ಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿ ಆರ್.ಎಮ್. ಬೇಪಾರಿ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಗ್ರಾಮಸ್ಥರು ಇದ್ದರು.