ಮೇಲ್ಛಾವಣಿ ಕುಸಿದು ವೃದ್ಧೆ ಸಾವು

0
38

ಗೋಕಾಕ: ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ವೃದ್ಧೆಯೋರ್ವಳು ಮೃತಪಟ್ಟ ಘಟನೆ ಗುರುವಾರ ರಾತ್ರಿ ವೇಳೆ ಸಂಭವಿಸಿದೆ.
ಫಕೀರವ್ವ ಲಕ್ಷ್ಮಣ ಹಾವೇರಿ(65) ಮೃತ ವೃದ್ಧೆ. ಮೃತ ಫಕೀರವ್ವಳ ಮನೆ ಹಳೆಯದಾಗಿದ್ದು ಮಳೆಯ ರಭಸಕ್ಕೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಕಿರಣ ಮೋಹಿತೆ ಸೇರಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಫಕೀರವ್ವಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.

Previous articleಸರಣಿ ಅಪಘಾತ, ಮೂವರು ಸಾವು
Next articleಬಾವಿಯಲ್ಲಿ 16 ಮೊಸಳೆ ಮರಿ ಪತ್ತೆ