ಅಜ್ಜಂಪುರ: ಇಲ್ಲಿನ ಸಮೀಪದ ಶಿವನಿ ಮೆಸ್ಕಾಂನ ಪ್ರಭಾರ ಸಹಾಯಕ ಇಂಜಿನಿಯರ್ ಕುಮಾರ್ ಅವರ ಮೇಲೆ ಸೋಮವಾರ ಲೋಕಾಯುಕ್ತ ದಾಳಿಯಾಗಿದೆ. ಮೆಸ್ಕಾಂ ಗುತ್ತಿಗೆದಾರ ಆನಂದ್ ಅವರಿಂದ ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಎರಡು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಪೈಕಿ ೨೦,೦೦೦ ರೂ. ತೆಗೆದುಕೊಳ್ಳುವಾಗ ನೇರವಾಗಿ ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಎಇಇ ಅವರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.