ಮೃತ ಬಾಣಂತಿಯರ ಕುಟುಂಬಕ್ಕೆ ಐದು ಲಕ್ಷ ಪರಿಹಾರ

0
32

ಬಳ್ಳಾರಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನಪ್ಪಿದ‌ ಬಾಣಂತಿಯರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಕೊಡಲಾಗುವುದು‌ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ‌ ಮಾಡಿದರು.
ಬಳ್ಲಾರಿ ಜಿಲ್ಲೆಯ ಸಂಡೂರಿನಲ್ಲಿ ಮತದಾರರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾವೇಶ ಕಾರ್ಯದಲ್ಲಿ ಮಾತನಾಡಿದರು. ಈ ಬಗ್ಗೆ ನಾನು ಈಗಾಗಲೆ ಸಭೆ ಮಾಡಿದ್ದೇನೆ. ಮೊದಲು ೨ ಲಕ್ಷ ಪರಿಹಾರ ಕೊಡಲು ಸೂಚನೆ‌ ಮಾಡಿದ್ದೆ. ಆದರೆ ಈಗ ಸಾವನಪ್ಪಿದ ಎಲ್ಲ ಬಾಣಂತಿಯರ ವಾರಸುದಾರರಿಗೆ ೫ ಲಕ್ಷ ಕೊಡಲಾಗುವುದು ಎಂದರು.
ಮುಂದುವರಿದ ಮಾತನಾಡಿದ ಸಿಎಂ, ತುಕಾರಾಂ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ನಂತ್ರ ಈ ಕ್ಷೇತ್ರ ತೆರವಾಗಿತ್ತು. ನಿಮ್ಮ ಎಲ್ಲರ ಅಭಿಪ್ರಾಯದಂತೆ ಅನ್ನಪೂರ್ಣ ಅವರನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಅವರನ್ನ ನೀವು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದೀರಿ. ಈ ಚುನಾವಣೆಯಲ್ಲಿ ಅನ್ನಪೂರ್ಣ ಅವರಿಗೆ ಅರ್ಶಿವಾದ ಮಾಡಿ ಸಂಡೂರು ಕಾಂಗ್ರೆಸ್ ಭದ್ರಕೋಟೆ ಅಂತಾ ಸಾಬೀತು ಮಾಡಿದ್ದೀರಿ. ಸಂಡೂರು ಕ್ಷೇತ್ರದ ಮತದಾರರಿಗೆ ಕಾರ್ಯಕರ್ತರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ.
ಅನ್ನಪೂರ್ಣ ಅವರನ್ನ ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದೀರಿ. ಅನ್ನಪೂರ್ಣ ತುಕಾರಾಂ ಅವರಿಗೂ ಅಭಿನಂದನೆ ಸಲ್ಲಿಸುವೆ. ನಾನು ಮೂರು ದಿನ ಕಾಲ ಇಲ್ಲಿ ಪ್ರಚಾರ ಮಾಡಿದೆ. ತುಕಾರಾಂ ಅವರು ಸರ್ಕಾರ ಕಾರ್ಯಕ್ರಮಗಳನ್ನು ಜಾರಿ ತಂದಿದ್ದಾರೆ. ತುಕಾರಾಂ ಅವರನ್ನ ಲೋಕಸಭೆಗೆ ಆಯ್ಕೆ ಮಾಡಿದ್ದೀರಿ. ಅನ್ನಪೂರ್ಣ ಅವರಿಗೆ ಆರ್ಶಿವಾದ ಮಾಡಿ ಅಂತಾ ನಾನು ಮನವಿ ಮಾಡಿದ್ದೆ.‌ಪಕ್ಷ ಹಾಗೂ ಸರ್ಕಾರದ ಸಾಧನೆಗಳು ನಿಮ್ಮ ಮುಂದೆ ಹೇಳಿದ್ದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಬಿಜೆಪಿ ಬಡವರ ಪರವಾಗಿಲ್ಲ ಸಂವಿಧಾನ ಪರವಾಗಿಲ್ಲ. ನಾವು ಈ ಬಾರಿ ನುಡಿದಂತೆ ನಡೆದಿದ್ದೇವೆ ಎಂದರು.
ಘೋಷಣೆ ಮಾಡಿದ ಐದು ಗ್ಯಾರೆಂಟಿ ಯೋಜನೆ ಜಾರಿ. ಯಾವುದೇ ಜಾತಿ ಪಕ್ಷ ಭೇದ ಮಾಡದೇ ಗ್ಯಾರೆಂಟಿ ಯೋಜನೆ ನೀಡಿದ್ದೇವೆ. ಗ್ಯಾರೆಂಟಿ ಯೋಜನೆಗಳಿಗೆ ನೀವು ಮನ್ನಣೆ ಕೊಡಬೇಕು ಪಕ್ಷಕ್ಕದೆ ಶಕ್ತಿ ಕೊಡಬೇಕು ಅಂತಾ ಮನವಿ ಮಾಡಿದ್ವಿ. ನೀವು ಗ್ಯಾರೆಂಟಿ ಯೋಜನೆಗಳಿಗೆ ಮನ್ನಣೆ ಕೊಟ್ಟಿದ್ದೀರಿ. ದೇಶದ ಇತಿಹಾಸದಲ್ಲಿ ಯಾವ ಸರ್ಕಾರ ಕೂಡ ಆರ್ಥಿಕ ಸಮಾನತೆ ತರುವ ಕೆಲ್ಸ ಮಾಡಿಲ್ಲ. ಚುನಾವಣೆ ಪೂರ್ವದಲ್ಲಿ ಐದು ಗ್ಯಾರೆಂಟಿ ಯೋಜನೆ ಪ್ರಸ್ತಾಪ ಮಾಡಿದ್ದೇವು. ನಾನು ಜನದ್ರೋಹ ಮಾಡಲ್ಲ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಬಿಜೆಪಿ ಅವರು ವಚನಭಂಗ ದ್ರೋಹ ಮಾಡಿದ್ದಾರೆ. ಇಂತಹ ಪಕ್ಷಕ್ಕೆ ನೀವು ಮನ್ನಣೆ ಕೊಡಬಾರದು. ಮೋದಿ ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಹೇಳಿದ್ರು. ಪ್ರತಿ ಅಕೌಂಟ್ ಗೆ 15 ಲಕ್ಷ ಕೊಡುವುದಾಗಿ ಹೇಳಿದ್ರು. ಅಚ್ಛೇ ದಿನ್ ಅಂತಾ ಹೇಳಿದ್ರು ಯಾವುದು ಕೊಡ ಆಗಲಿಲ್ಲ ಜನಾರ್ಧನರೆಡ್ಡಿ ಸಂಡೂರು ಜವಾಬ್ದಾರಿ ತೆಗೆದುಕೊಂಡಿದ್ದರು. ಕಾಂಗ್ರೆಸ್ ಪಕ್ಷವನ್ನ ಸೋಲಿಸುವುದಾಗಿ ಹೇಳಿದರು.
ಬಳ್ಳಾರಿ ಜಿಲ್ಲೆಗೆ ಜನಾರ್ಧನರೆಡ್ಡಿ ಕಳಂಕ ತಂದಿದ್ದಾರೆ. ಜನಾರ್ಧನರೆಡ್ಡಿ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಅಂತಾ ವರದಿ ಕೊಟ್ಟಿದ್ದು ಸಂತೋಷ್ ಹೆಗೆಡೆ. ಅಕ್ರಮ ಗಣಿಗಾರಿಕೆ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದೆ. ಸುರೇಶ್ ಬಾಬು ಬಳ್ಳಾರಿಗೆ ಬನ್ನಿ ಅಂತಾ ಸವಾಲು ಹಾಕಿದ್ರು. ನಾನು ಒಂದು ಹೆಜ್ಜೆ ಮುಂದೆ ಇಟ್ಟರೆ ಕಾಲು ಮುರಿತೀನಿ ಅಂತಾ ಹೇಳಿದೆ. ಈಗ ಸೋತು ಎಲ್ಲರೂ ಮನೆ ಸೇರಿದ್ದಾರೆ. ಸಂಡೂರನ್ನ ರಿಪಬ್ಲಿಕ್ ಆಫ್ ಸಂಡೂರು ಮಾಡಲು ಬಂದ್ರು ಜನರು ಬಿಡಲಿಲ್ಲ. ರಾಜಕುಮಾರ ಅವರು ಅಭಿಮಾನಿಗಳನ್ನ ಅಭಿಮಾನಿಗಳು ದೇವರೇ ಅಂತಾ ಕರೆಯುತ್ತಿದ್ದಾರೆ. ನಾನು ಮತದಾರರ ದೇವರೇ ಅಂತಾ ಕರೆಯುವೆ
ಬಿಜೆಪಿ ಅವರು ಜನರ ಆರ್ಶಿವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲ ಮಾಡಿ ಕೋಟಿ ಕೋಟಿಗಳ ಮೂಲಕ ಶಾಸಕರನ್ನ ಖರೀದಿ ಮಾಡಿದ್ರು. ಮೋದಿಯವರೇ 17 ಶಾಸಕರನ್ನ ಖರೀದಿ ಮಾಡಿದ್ರಿ ಎಲ್ಲಿಂದ ಬಂತು ಹಣ. ಅದು ಲಂಚದ ಹಣ ಅಲ್ವಾ? ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದರು.

Previous articleಸುವರ್ಣಸೌಧದೊಳಗೆ `ಅನುಭವ ಮಂಟಪ’
Next articleಬಾಣಂತಿಯರ ಸಾವಿಗೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ