ಮೂವರು ಯುವತಿಯರ ರಕ್ಷಣೆ

0
17

ಗೋಕರ್ಣ: ಸುಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಮೂವರು ಯುವತಿಯರನ್ನು ಜೀವರಕ್ಷ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ರವಿವಾರ ಮಧ್ಯಾಹ್ನ ಕುಡ್ಲೆ ಬೀಚ್‌ನಲ್ಲಿ ನಡೆದಿದೆ. ಬೆಂಗಳೂರು ಜಯನಗರದ ನಿವಾಸಿಗಳಾದ ಸ್ಮಿತಾ ರವಿಚಂದ್ರನ್ (೨೩), ನಿಹಾರಿಕಾ ಗಿರಿ (೨೨), ಪವಿತ್ರಾ ಸುಂದರ(೨೨) ಜೀವಾಪಾಯದಿಂದ ಪಾರಾಗಿ ಬಂದ ಯುವತಿಯರು. ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಸುಳಿಗೆ ಸಿಲುಕಿ ಅಪಾಯದಲ್ಲಿದ್ದರು.

ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿಗಳಾದ ನವೀನ ಅಂಬಿಗ, ಮಂಜುನಾಥ ಅಂಬಿಗರ ತಕ್ಷಣ ಧಾವಿಸಿ ರಕ್ಷಣೆ ಮಾಡಿದರು. ಕುಡ್ಲೆ ವಾಟರ್ ಸ್ಪೋರ್ಟ್ಸ್ ಮೈಸ್ಟಿಕ್ ಸಿಬ್ಬಂದಿಗಳು ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ

Previous articleಒಂದೇ ಲಿಂಬೆಗೆ 35,000 ರೂ
Next articleಸಂವಿಧಾನ ತಿದ್ದುಪಡಿಗೆ ೪೦೦ಕ್ಕೂ ಹೆಚ್ಚು ಸ್ಥಾನದ ಅವಶ್ಯಕತೆ