ಮೂರನೇ ಮಗುವಿನ ಜವಾಬ್ದಾರಿ ಸೇನೆಯದ್ದು

0
12

ಹುಬ್ಬಳ್ಳಿ: ಭಾರತದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಹಿಂದೂಗಳೂ ತಕ್ಕ ಉತ್ತರ ನೀಡಬೇಕು. ಕೇವಲ ೧-೨ ಮಕ್ಕಳನ್ನು ಹೆತ್ತು ಸುಮ್ಮನಾಗದೇ, ೩ ಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು. ಆ ಮಗುವಿನ ಶಿಕ್ಷಣ, ಆರೋಗ್ಯ, ಮದುವೆ ಹಾಗೂ ಉದ್ಯೋಗದ ಜವಾಬ್ದಾರಿಯನ್ನು ಶ್ರೀರಾಮ ಸೇನೆಯೇ ಹೊರಲಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಇಲ್ಲಿನ ಶಿವಕೃಷ್ಣ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ದುಬಾರಿ ವ್ಯವಸ್ಥೆಗೆ ಹೆದರಿರುವ ಹಿಂದೂಗಳು ಕೇವಲ ೧-೨ ಮಕ್ಕಳನ್ನು ಹೆತ್ತು ಅವರ ಪಾಲನೆ, ಪೋಷಣೆಯಲ್ಲೇ ದಿನ ಕಳೆಯುತ್ತಿದ್ದಾರೆ. ಹೊರ ಜಗತ್ತಿನ ಆಗು ಹೋಗುಗಳ ಬಗ್ಗೆ ನಮ್ಮವರಿಗೆ ಅರಿವೇ ಇಲ್ಲ. ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಮೂಲಕ ನಮ್ಮ ಸಂಖ್ಯೆಯನ್ನು ಅಧಿಕಗೊಳಿಸಬೇಕಿದೆ ಎಂದು ಪ್ರತಿಪಾದಿಸಿದರು.
ನಮ್ಮ ಹೆಣ್ಣುಮಕ್ಕಳು, ಯುವತಿಯರು ಮುಸ್ಲಿಂ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ನಂಬಿಕೆ ದ್ರೋಹ ಮಾಡುವ ಅನ್ಯ ಕೋಮಿನವರು ತಾವು ಹಿಂದೂಗಳು ಎಂದು ಪರಿಚಯ ಮಾಡಿಕೊಂಡು ನಂತರ ಬುರ್ಖಾ ಧರಿಸುವಂತೆ, ಗೋ ಮಾಂಸ ಸೇವಿಸುವಂತೆ ಹಾಗೂ ಅನೇಕ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಇಂದು ನೀಡಲಾಗಿರುವ ತ್ರಿಶೂಲವನ್ನು ನಿಮ್ಮ ವ್ಯಾನಿಟಿ ಬ್ಯಾಗಿನಲ್ಲೇ ಇಟ್ಟುಕೊಂಡಿರಿ. ಯಾರೇ ನಿಮ್ಮ ತಂಟೆಗೆ ಬಂದರೆ ಜೀವ ರಕ್ಷಣೆಗೆ ಬಳಸಿಕೊಳ್ಳಿ ಎಂದು ಕರೆ ನೀಡಿದರು.

Previous articleಬಾವಿಗೆ ಬಿದ್ದು ಮಹಿಳೆ ಸಾವು
Next article6 ದಿನವಾದ್ರೂ ರಿತೇಶ್ ಕುಟುಂಬಸ್ಥರ ಪತ್ತೆಯಿಲ್ಲ