ಎರಡಂಕಿಯನ್ನು ದಾಟದ ಕಾಂಗ್ರೆಸ್ ಮುನ್ನೂರು ಗೆದ್ದಂತೆ ಬೀಗುತ್ತಿದೆ

0
6

ಬೆಂಗಳೂರು: ಎರಡಂಕಿಯನ್ನು ದಾಟಲಾಗದ ಕಾಂಗ್ರೆಸ್ ಪಕ್ಷ ಮುನ್ನೂರು ಸೀಟು ಗೆದ್ದಿರುವಂತೆ ಬೀಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ದೇಶದಲ್ಲಿ ಮೂರಂಕಿಯೂ ದಾಟಿಲ್ಲ ಆದರೂ ಶೋಕಿ ಮಾತ್ರ ಕಡಿಮೆ ಇಲ್ಲ, ಸತತ ಮೂರನೇ ಬಾರಿಗೆ ದೇಶದಲ್ಲಿ ಮೂರಂಕಿ ದಾಟಲಾಗದ ಕಾಂಗ್ರೆಸ್ ಪಕ್ಷ ಮುನ್ನೂರು ಸೀಟು ಗೆದ್ದಿರುವಂತೆ ಬೀಗುತ್ತಿದೆ.
ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆದ್ದ ಸೀಟುಗಳು
2014 ರಲ್ಲಿ – 44
2019 ರಲ್ಲಿ – 52
2024 ರಲ್ಲಿ – 99
ಒಟ್ಟು – 195
ಬಿಜೆಪಿ 2024 ರಲ್ಲಿ ಗೆದ್ದಿರುವ ಸೀಟುಗಳು – 240

ಅಂದರೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆದ್ದ 195 ಸೀಟುಗಳಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ 2024ರ ಒಂದು ಚುನಾವಣೆಯಲ್ಲಿ ಗೆದ್ದಿರುವ 240 ಸೀಟುಗಳೇ ಹೆಚ್ಚು ಎಂದಿದ್ದಾರೆ.

Previous articleNDA-INDIA ಮೈತ್ರಿಕೂಟಗಳಿಂದ ಮುಂದಿನ ಸರ್ಕಾರ ರಚನೆ ಕಸರತ್ತು
Next articleಉತ್ತರಾಖಂಡದಲ್ಲಿ ಕರ್ನಾಟಕದ ನಾಲ್ವರು ಚಾರಣಿಗರ ಸಾವು