ಮೂರಂಕಿ ತಲುಪಿದ ಕಾಂಗ್ರೆಸ್!

0
24

ನವದೆಹಲಿ: ಮಹಾರಾಷ್ಟ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿಶಾಲ್ ಪಾಟೀಲ್ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದು. 99 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ವಿಶಾಲ್ ಪಾಟೀಲ್ ಅವರ ಬೆಂಬಲದೊಂದಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಬಲ 100ಕ್ಕೆ ಏರಿದೆ. ಈ ಕುರಿತಂತೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸಾಂಗ್ಲಿಯಿಂದ ಚುನಾಯಿತ ಸಂಸದ ವಿಶಾಲ್ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸ್ವಾಗತಿಸಿದ್ದಾರೆ.
ಲೋಕಸಭೆಯ ಸೆಕ್ರೆಟರಿಯೇಟ್ ಒಪ್ಪಿಗೆ ನೀಡಿದರೆ, ವಿಶಾಲ್ ಪಾಟೀಲ್ ಅವರನ್ನು ಕಾಂಗ್ರೆಸ್‌ನ ಸಹ ಸಂಸದ ಎಂದು ಕರೆಯಬಹುದು ಮತ್ತು ಲೋಕಸಭೆಯಲ್ಲಿ ಪಕ್ಷದ ಬಲ 100 ಆಗಲಿದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

Previous articleನೈರುತ್ಯ ಪದವೀಧರ ಚುನಾವಣೆ: ಬಿಜೆಪಿಯ ಧನಂಜಯ್ ಸರ್ಜಿ ಗೆಲುವು
Next articleನೀಟ್‌ ಫಲಿತಾಂಶ: ತರಾತುರಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದು ಯಾಕೆ?