ಮುರುಘಾ ಶ್ರೀಗೆ ಮತ್ತೆ ಸಂಕಷ್ಟ

0
17

ಚಿತ್ರದುರ್ಗ: ಜಾಮೀನು ಆದಾರದ‌‌‌ ಮೇಲೆ‌ ‌ಜೈಲಿನಿಂದ ಬಿಡುಗಡೆಯಾಗಿದ್ದ ಮುರುಘಾಶರಣರಿಗೆ ಮತ್ತೆ ಜಾಮೀನು‌ರಹಿತ ಬಂಧನಕ್ಕೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಾರೆಂಟ್‌‌ ‌ಹೊರಡಿಸಿದ್ದು‌ ಇದರಿಂದ ಶರಣರಿಗೆ ‌ಮತ್ತ ಸಂಕಷ್ಟ ಎದುರಾಗಿದೆ.
ಮೊದಲ ಲೈಂಗಿಕ ದೌರ್ಬಲ್ಯ ಪ್ರಕರಣದಲ್ಲಿ ಜಾಮೀನು ಪಡೆದು ನವೆಂಬರ್ 16 ರಂದು ಜೈಲಿನಿಂದ‌ ಬಿಡುಗಡೆಯಾಗಿದ್ದರು. ಈಗ ಮತ್ತೆ ಜೈಲುವಾಸ ಅನುಭವಿಸುವುದು ಅನಿವಾರ್ಯವಾಗಿದೆ. ಶರಣರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ಮಂಗಳವಾರದವರೆಗೆ ಕಾಲಾವಕಾಶ ನೀಡಿ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು ಸೋಮವಾರ ಆದೇಶ ಪ್ರಕಟಿಸಿದರು.

Previous articleಯೋಚನೆಗಳು ಯೋಜನೆಯಾಗಿ ಜಾರಿಗೊಳಿಸಿದ್ದೇವೆ
Next articleಮತ್ತೆ ಶರಣರ ಬಂಧನ