ವಿಜಯಪುರ: ಶಾಸಕ ಮುನಿರತ್ನ ಬಂಧನಕ್ಕೆ ಸಂಬಂಧಿಸಿ ಪ್ರಕರಣದಲ್ಲಿನ ಆಡಿಯೋದಲ್ಲಿ ಏನಿದೆ ನನಗೆ ಗೊತ್ತಿಲ್ಲ, ನಕಲಿ ಆಡಿಯೋಗಳನ್ನು ಸೃಷ್ಟಿಸುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಆಡಿಯೊ ಕುರಿತು ತನಿಖೆ ನಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಹಾಸ್ಯ ಕಲಾವಿದ ಒಬ್ಬ ಇದ್ದಾನೆ, ಎಷ್ಟು ಚೆಂದ ಮಿಮಿಕ್ರಿ ಮಾಡುತ್ತಾರೆ, ಕಾಮಿಡಿ ಮಾಡುತ್ತಾರೆ ಎಂದು ಪರೋಕ್ಷವಾಗಿ ಮುನಿರತ್ನ ಆಡಿಯೋ ಡೂಪ್ಲಿಕೇಟ್ ಎಂದು ಪ್ರತಿಕ್ರಿಯಿಸಿದರು.