ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ

0
28

ಮೈಸೂರು: ಮುಡಾ ಪ್ರಕರಣದ ತನಿಖೆ ಪ್ರಸ್ತುತ ಲೋಕಾಯುಕ್ತದಲ್ಲಿದ್ದು, ನಾನು ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮುಡಾ ಪ್ರಕರಣ ಸಂಬಂಧ ಸಿಎಂ ವಿರುದ್ಧ ಇಡಿಯಲ್ಲಿ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇಡಿಯಲ್ಲಿ ದೂರು ದಾಖಲಾಗಿದ್ದರೆ, ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದರು.

ಅಧಿಕಾರಿಗಳ ವಿರುದ್ಧ ಟೀಕೆ ಸರಿಯಲ್ಲ
ಕುಮಾರಸ್ವಾಮಿಯವರು ಲೋಕಾಯುಕ್ತ ಎಡಿಜಿಪಿ ಮೇಲೆಯೂ ಟೀಕೆ ಮಾಡುತ್ತಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರು ತಪ್ಪೆಸೆಗಿಸಿದ್ದು, ಅಧಿಕಾರಗಳ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳ ಮೇಲೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ

ರೇವ್ ಪಾರ್ಟಿ ವಿರುದ್ಧ ಪೊಲೀಸರ ಕ್ರಮ
ಮೈಸೂರಿನಲ್ಲಿ ರೇವ್ ಪಾರ್ಟಿ ನಡೆದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರೇವ್ ಪಾರ್ಟಿ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಅಕ್ಟೋಬರ್ 2ರಂದು ದಸರಾ ಸಿದ್ಧತೆಗಳ ವೀಕ್ಷಣೆ
ದಸರಾ ಉತ್ಸವದ ಸಿದ್ಧತೆಗಳ ಪರ್ತಕರ್ತರಿಗೆ ಮಾಹಿತಿ ನೀಡುತ್ತಾ, ದಸರಾ ಉತ್ಸವಗಳ ಸಿದ್ದತೆಗಳಿಗೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸಿದ್ಧತೆಗಳನ್ನು ವೀಕ್ಷಿಸಲು ಅಕ್ಟೋಬರ್ 2ರಂದು ಮೈಸೂರಿಗೆ ಆಗಮಿಸಲಿದ್ದೇನೆ ಎಂದರು.

Previous articleಮರ್ಯಾದೆ ಇದ್ದರೆ ಒಂದು ಸಿಂಪಲ್ ಸಹಿ ಮಾಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು
Next articleಕೆಲವರು ಸಾವಿರ ಕೋಟಿ ಹಣ ಇಟ್ಟುಕೊಂಡು ಸಿಎಂ ಸ್ಥಾನಕ್ಕೆ ಕಾಯುತ್ತಿದ್ದಾರೆ