ನವದೆಹಲಿ: ಯೋಗಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯು ತನ್ನ ಔಷಧಗಳು ಮತ್ತವುಗಳ ಪರಿಣಾಮ ಬಗ್ಗೆ ಹೇಳಿಕೆ ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಬರೆದುಕೊಟ್ಟ ಮುಚ್ಚಳಿಕೆ ಉಲ್ಲಂಘಿಸಿರುವುಕ್ಕೆ ಮೇಲ್ನೋಟದ ಸಾಕ್ಷö್ಯಗಳಿವೆ. ಹೀಗಾಗಿ ಕಂಪನಿ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ನೋಟಿಸ್ ಹೊರಡಿಸಿದೆ. ಕಳೆದ ನ. ೨೧ರಂದು ಯಾವುದೇ ಔಷಧ ವ್ಯವಸ್ಥೆ ಅಥವಾ ಉತ್ಪನ್ನಗಳ ವಿರುದ್ಧ ಹೇಳಿಕೆ ನೀಡುವುದಿಲ್ಲ ಎಂದು ಪತಂಜಲಿ ಪರ ವಕೀಲರು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆಧುನಿಕ ಔಷಧ ಹಾಗೂ ಕೊರೊನಾ ಲಸಿಕೆ ವಿರುದ್ಧ ರಾಮ್‌ದೇವ್ ವ್ಯತಿರಿಕ್ತ ರೀತಿಯ ಪ್ರಚಾರ ಮಾಡಿರುವ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ ಅವರ ವಿರುದ್ಧ ದಾವೆ ಹೂಡಿದೆ.