ಹಣವನ್ನು ಮಂಜೂರು ಮಾಡಿ ಅನ್ನ, ಅಕ್ಷರದ ದಾಸೋಹ ಮಾಡುತ್ತಿರುವ ಮಠಗಳನ್ನು ಗೌರವಿಸಲಿ
ಬೆಂಗಳೂರು: ಮುಖ್ಯ ಮಂತ್ರಿಗಳು ಆದೇಶ ಮಾಡಿದ್ರು ಸಚಿವರು ಮಂಜೂರು ಮಾಡಲು ನಿರಾಕರಣೆ ಮಾಡುತ್ತಿರುವುದು ಎಷ್ಟು ಸರಿ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿಶ್ವಗಾಣಿಗರ ಸಮುದಾಯ ಟ್ರಸ್ಟ್‌ಗೆ ಮಂಜೂರಾಗಿದ್ದ ಹಣವನ್ನು ಸಚಿವ ಶಿವರಾಜ್ ತಂಗಡಗಿ ಅವರು ತಡೆಹಿಡಿದ್ದಾರೆಂದು ತೈಲೇಶ್ವರ ಗಾಣಿಗ ಸಮುದಾಯದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಅವರು ಕಣ್ಣೀರಿಟ್ಟಿರುವುದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಹಾಗೂ ಹಿಂದುಳಿದ ವರ್ಗಕ್ಕೆ ಬಗೆದ ಅನ್ಯಾಯವನ್ನು ತೋರಿಸುತ್ತದೆ . ಮುಖ್ಯ ಮಂತ್ರಿಗಳು ಆದೇಶ ಮಾಡಿದ್ರು ಸಚಿವರು ಮಂಜೂರು ಮಾಡಲು ನಿರಾಕರಣೆ ಮಾಡುತ್ತಿರುವುದು ದುಷ್ಟ ರಾಜಕೀಯದ ಪರಮಾವಧಿ. ಸಚಿವರು ಕೂಡಲೇ ಹಣವನ್ನು ಮಂಜೂರು ಮಾಡಿ ನಾಡಿನ ಸಾಕ್ಷಿ ಪ್ರಜ್ಞೆಗಳಾದ ಸ್ವಾಮೀಜಿಗಳನ್ನು, ಅನ್ನ, ಅಕ್ಷರದ ದಾಸೋಹ ಮಾಡುತ್ತಿರುವ ಮಠಗಳನ್ನು ಗೌರವಿಸಲಿ ಎಂದಿದ್ದಾರೆ.