ಮುಖ್ಯಮಂತ್ರಿ ವಿಳಂಬ ಮಾಡದೇ ರಾಜೀನಾಮೆ ಕೊಡಲಿ

0
109

ನವದೆಹಲಿ: ಮುಡಾ ಹಗರಣದಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಕ್ಷಣ ವಿಳಂಬ ಮಾಡದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿರುವುದು ಸ್ವಾಗತಾರ್ಹ. ಹೀಗಾಗಿ ರಾಜೀನಾಮೆ ನೀಡದೇ ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ನ್ಯಾಯಯೋಚಿತವಲ್ಲ. ಕಾಂಗ್ರೆಸ್ ಡಿಎನ್‌ಎ ನಲ್ಲಿಯೇ ಭ್ರಷ್ಟಾಚಾರದ ಇದೆ ಎಂದು ಹೇಳಿದ್ದೆ. ಅದೆ ರೀತಿ ಹೈಕೋರ್ಟ್ ಇಂದು ತೀರ್ಪು ನೀಡಿದೆ. ಮೇಲ್ನೋಟಕ್ಕೆ ಅಧಿಕಾರ ದುರುಪಯೋಗ ಎಂದು ಹೈಕೋರ್ಟ್ ಹೇಳಿದೆ. ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗ ಮಾಡಲಾಗಿದೆ. ಈ ಹಿನ್ನಲೆ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ಈ ಹಿಂದೆ ಯಡಿಯೂರಪ್ಪರ ಮೇಲೆ‌ ಏನು ಹೇಳಿದ್ದಿರಿ ಎಂದು ನೆನಪು ಮಾಡಿಕೊಳ್ಳಿ ಎಂದರು.

Previous articleಬಿಜೆಪಿ-ಜೆಡಿಎಸ್‌ನ ಪಿತೂರಿಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ
Next articleಹುಬ್ಬಳ್ಳಿ-ಧಾರವಾಡ ಜನರಿಗೆ ಗೌ.ಡಾ. ಸಮರ್ಪಣೆ