ಮುಖ್ಯಮಂತ್ರಿಯಾದರೆ ಸಾವಿರ ಜೆಸಿಬಿ ಖರೀದಿಸುವೆ

0
28

ಬಾಗಲಕೋಟೆ(ಗುಳೇದಗುಡ್ಡ): ದೇಶವನ್ನು ವಿರೋಧಿಸುವ, ಲವ್ ಜಿಹಾದ್, ಗೋಹತ್ಯೆ ಮಾಡುವ, ವಕ್ಫ್ ಆಸ್ತಿ ನುಂಗುವ, ಪೊಲೀಸ್ ಸ್ಟೇಷನ್ ಮೇಲೆ ಕಲ್ಲೆಸೆಯುವುದು, ಅವರ ಜೀಪ್ ಮೇಲೆ ಭಾಷಣ ಮಾಡುವುದು, ಮಹಿಳಾ ಪೊಲೀಸ್ ಕಾನಸ್ಟೇಬಲ್ ಮೈಮೇಲೆ ಹೋಗುವುದು ನಡೆದರೂ ಕಾಂಗ್ರೆಸ್ ಏನೂ ಮಾಡಲಿಲ್ಲ. ನಾನೇನಾದರೂ ಮುಖ್ಯಮಂತ್ರಿಯಾದರೆ ಇದೆಲ್ಲ ಸಮಾಪ್ತಿಯಾಗುತ್ತದೆ. ಸಾವಿರ ಜೆಸಿಬಿ ಖರೀದಿಸುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ಸಮಸ್ತ ಹಿಂದೂ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಗಚ್ಚಿನಕಟ್ಟಿಯ ಶ್ರೀ ಕೃಷ್ಣದೇವರಾಯ ಹಾಗೂ ಇಮ್ಮಡಿ ಪುಲಕೇಶಿ ವೇದಿಕೆ ಮೇಲೆ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಸ್ವಾಮೀಜಿಗಳಲ್ಲೂ ಕಲರಬೆರಿಕೆಯಾಗಿವೆ. ನಮ್ಮ ಧರ್ಮವನ್ನು ಬೆಳೆಸುವುದು ಬಿಟ್ಟು ಲಿಂಗಾಯತ ಹಾಗೂ ಇಸ್ಲಾಂ ಧರ್ಮ ಸಮ ಎಂದು ಹೇಳುವರನ್ನು ಬಿಟ್ಟು ನಮ್ಮ ಧರ್ಮದ ಪರವಾಗಿ ಮಾತನಾಡುವ ಶ್ರೀಗಳಿಗೆ ಬೆಂಬಲವಾಗಿ ನಿಲ್ಲಿ, ಅವರೊಂದಿಗೆ ಕೈ ಜೋಡಿಸಿ ಎಂದರು.
ಈ ದೇಶಕ್ಕೆ ಸ್ವಾತಂತ್ರ್ಯ ನೆಹರು ಕುಟುಂಬದಿಂದ ಸಿಕ್ಕಿಲ್ಲ. ಶಿವಾಜಿ ಮಹಾರಾಜರಂಥಹ ನೂರಾರು ದೇಶ ಭಕ್ತರಿಂದ ಸ್ವಾತಂತ್ರ್ಯ ಸಿಕ್ಕಿದೆ. ಇನ್ನು ಮುಂದೆ ಹಿಂದೂ ಧರ್ಮದ ಬಗ್ಗೆ ಮಾತನಾಡದ ಮತ್ತೊಂದು ಧರ್ಮದವರನ್ನು ಭಾಯಿ ಭಾಯಿ ಅನ್ನುವ ಸ್ವಾಮೀಜಿಗೆ ಕೈ ಮುಗಿಯಬೇಡಿ. ಮದರಸಾಗಳಲ್ಲಿ ಏನು ಕಲಿಸುತ್ತಾರೆ ನೋಡಿ, ದೇಶ ಭಕ್ತಿ ಕಲಿಸುತ್ತಿಲ್ಲ. ಮುಸ್ಲಿಂ ಮಹಿಳೆಯರ ರಕ್ಷಣೆಗೆ ಕೊಚಿಂಗ್ ನೀಡಲು ಸರ್ಕಾರ ಹಣ ಖರ್ಚು ಮಾಡಲು ನಿರ್ಧರಿಸಿದೆ. ಅದು ಯಾಕೆ ಎಂದು ಪ್ರಶ್ನಿಸಿ, ಇನ್ನು ಮುಂದೆ ಹಿಂದೂಗಳು ಒಂದಾಗಿ, ಜಾತಿ ನೋಡದೇ ಅತ್ಯುತ್ತಮರನ್ನು ಗೆಲ್ಲಿಸಿ ಅಂದಾಗ ದೇಶ, ಹಿಂದುತ್ವ ಉಳಿಯುತ್ತದೆ ಎಂದರು.

Previous articleತಲೆ ಕೆಳಗಾಗಿಸಿ ಡೈವ್: ಯುವಕ ಸಾವು
Next articleಕಲಬುರಗಿಯಲ್ಲಿ ನೆರವೇರಿದ ಬಿಎಸ್‌ವೈ ಮೊಮ್ಮಗನ ನಿಶ್ಚಿತಾರ್ಥ