ಮುಂಡಗಾರು ಲತಾ ವಿರುದ್ಧ ಪ್ರಕರಣ ದಾಖಲು

0
24

ಚಿಕ್ಕಮಗಳೂರು: ಶೃಂಗೇರಿಯ ಗ್ರಾಮವೊಂದರ ಮನೆಗೆ ಬಂದು ಗನ್ ತೋರಿಸಿ ಊಟ ಮಾಡಿ ಹೋಗಿದ್ದಾರೆಂಬ ಆರೋಪದಡಿ ಹಾರ್ಡ್ ಕೋರ್ ನಕ್ಸಲ್ ಮುಂಡಗಾರು ಲತಾ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಯು.ಎ.ಪಿಎ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ
ಎ.ಎನ್.ಎಫ್. ಡಿವೈಎಸ್ಪಿ ದೂರಿನ ಹಿನ್ನೆಲೆ ಎಫ್‌ಐಆರ್ ಆಗಿದ್ದು ಮುಂಡಗಾರು ಲತಾ, ಜಯಣ್ಣ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ, ಮನೆಗೆ ಬಂದು ಗನ್ ತೋರಿಸಿ ಊಟ ಮಾಡಿ ಹೋದ ಮುಂಡಗಾರು ಲತಾ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗುತ್ತಿದ್ದಂತೆ ಸ್ಥಳದಿಂದ ನಕ್ಸಲರು ನಾಪತ್ತೆಯಾಗಿದ್ದಾರೆ
ಈ ವೇಳೆ ಸ್ಥಳದಲ್ಲಿ ೩ ಗನ್ ಹಾಗೂ ಗುಂಡುಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡ ನಕ್ಸಲರಿಗಾಗಿ ಸ್ಥಳಿಯ ಪೊಲೀಸರ ಜೊತೆ ಎ.ಎನ್.ಎಫ್. ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ. ಡಾಗ್ ಸ್ಕ್ಯಾಡ್ ಜೊತೆ ಕೂಂಬಿಂಗ್ ಸಹಾ ಚುರುಕು ಗೊಳಿಸಿದ ಪೊಲೀಸರು ಅಲರ್ಟ್ ಆಗಿದ್ದಾರೆ ಇದರೊಂದಿಗೆ ದಶಕಗಳ ಬಳಿಕ ಮಲೆನಾಡಲ್ಲಿ ಮತ್ತೆ ನಕ್ಸಲರ ಹೆಜ್ಜೆ ಗುರುತುಗಳು ಕಂಡು ಬಂದಿವೆ.

Previous articleಬಡವರ ಪರ ಕೆಲಸ ಮಾಡುವುದು ನಮ್ಮ ಬದ್ಧತೆ
Next articleಕಲ್ಯಾಣ ಕರ್ನಾಟಕ ಅಕ್ರಮ ತುರ್ತು ಸರ್ಜರಿ ಅಗತ್ಯ