ತೆಲಂಗಾಣಕ್ಕೆ 10 ಟಿಎಂಸಿ ನೀರು ಹರಿಸಿದ ಸರ್ಕಾರಕ್ಕೆ ರಾಜ್ಯದ ಅನ್ನದಾತರ ಕೃಷಿ ಚಟುವಟಿಕೆಗಳಿಗೆ ನೀರಿಲ್ಲ
ಬೆಂಗಳೂರು: ಮಾರ್ಚ್ 26ರಂದು ನಡೆಯುವ ಟ್ರಾಕ್ಟರ್ ಜಾಥಾವನ್ನು ನಾವೆಲ್ಲರೂ ಬೆಂಬಲಿಸೋಣ ಎಂದು ಬಿಜೆಪಿ ಎಂಎಲ್‌ಸಿ ಸಿ ಟಿ ರವಿ ಹೇಳಿದ್ದಾರೆ.
ನಾರಾಯಣಪುರ ಬಸವ ಸಾಗರ ಬಲದಂಡೆ ಮತ್ತು ಎಡದಂಡೆ ಕಾಲುವೆಗೆ ಏಪ್ರಿಲ್ 10 ರ ವೆರೆಗೆ ನೀರು ಹರಿಸುವ ಸಲುವಾಗಿ ಬೃಹತ ಟ್ರ್ಯಾಕ್ಟರ್ ಜಾಥ ಮುಖಾಂತರ ಪ್ರತಿಭಟನೆಗೆ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ತೆಲಂಗಾಣಕ್ಕೆ 10 ಟಿಎಂಸಿ ನೀರು ಹರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಅನ್ನದಾತರ ಕೃಷಿ ಚಟುವಟಿಕೆಗಳಿಗೆ ನಾರಾಯಣಪುರ ಬಸವ ಸಾಗರ ಎಡದಂಡೆ ಹಾಗು ಬಲದಂಡೆ ಕಾಲುವೆಗೆ ಹರಿಸಲು ನೀರಿಲ್ಲವಂತೆ.
ಹೊರ ರಾಜ್ಯದ ಜನರ ಕಣ್ಣಿಗೆ ಬೆಣ್ಣೆ, ನಮ್ಮ ರಾಜ್ಯದ ಜನರ, ಅದೂ ಅನ್ನದಾತ ರೈತರ ಕಣ್ಣಿಗೆ ಸುಣ್ಣ. ನಮ್ಮ ರೈತರ ಕೃಷಿ ಕಾರ್ಯದ ಅಗತ್ಯಕ್ಕೆ ಬೇಕಾದ ನೀರನ್ನು ಹರಿಸದೆ, ಕಣ್ಣಿದ್ದೂ ಕುರುಡಾಗಿ ಕುಳಿತ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಲು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ (ರಾಜುಗೌಡ) ಅವರ ನೇತೃತ್ವದಲ್ಲಿ ಮಾರ್ಚ್ 26ರಂದು ನಡೆಯುವ ಟ್ರಾಕ್ಟರ್ ಜಾಥಾವನ್ನು ನಾವೆಲ್ಲರೂ ಬೆಂಬಲಿಸೋಣ ಎಂದಿದ್ದಾರೆ.