ಮಾನಸಿಕವಾಗಿ ನೊಂದು ಮಹಿಳೆ ಆತ್ಮಹತ್ಯೆ

0
8
ಆತ್ಮಹತ್ಯೆ

ಉಡುಪಿ: ಮಾನಸಿಕವಾಗಿ ನೊಂದ ಮಹಿಳೆಯೊರ್ವಳು ಮನೆಯ ಅಡಿಗೆ ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಂಗ್ರಪಾಡಿಯ ಸಾಯಿಬಾಬ ಮಂದಿರದ ಬಳಿ ನಡೆದಿದೆ.
ಕೊರಂಗ್ರಪಾಡಿಯ ಸಾಯಿಬಾಬ ಮಂದಿರದ ಬಳಿಯ ನಿವಾಸಿ ಭಾರತಿ ಶೆಟ್ಟಿಗಾರ್ (53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ನೇಕಾರಿಕೆ ಕೆಲಸ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ನೆರೆಮನೆಯವರಿಗೆ ಪೋನ್ ಕರೆ ಮಾಡಿ ತಿಳಿಸಿದ್ದರು. ಆದರೆ, ನೆರೆಮನೆಯವರು ಬಂದು ನೋಡುವಾಗ ಭಾರತಿ ಅವರು ಮೃತಪಟ್ಟಿದ್ದರು. ಮಹಿಳೆ ಬರೆದಿರುವ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ 500 ರೂ ಬೈಲೂರು ಮಹಿಷಿಮರ್ಧಿನಿ ದೇವಸ್ಥಾನದಲ್ಲಿ ನಡೆಯುವ ಹೂವಿನ ಪೂಜೆಗೆ ಮತ್ತು 200 ರೂಪಾಯಿ ದಿನ ಪತ್ರಿಕೆಯ ತಿಂಗಳ ಬಿಲ್ಲು ಪಾವತಿಸ ಬೇಕು, ಗಂಡನ ಪೋಷಣೆಗೆ ನನ್ನ ಚಿನ್ನ ಹಣ ಸಾಕು ಎಂದು ಬರೆಯಲಾಗಿದೆ.

Previous articleಉಚಿತ ಪಡಿತರ ಮಿತಿ ಐದು ಕೆಜಿಯಿಂದ 10 ಕೆಜಿಗೆ
Next articleದೊಣ್ಣೆಯಿಂದ ಹೊಡೆದು ಪತಿಯ ಕೊಲೆ