ಮಾಧ್ಯಮದ ಅಲೆಯಲ್ಲಿ ಮೋದಿ‌ ಗೆಲುವು

0
10

ಧಾರವಾಡ: ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬದಲಾಗಿದೆ. ಮೋದಿ ಅವರು ತಮ್ಮ ಅಲೆಗಿಂತ ಮಾಧ್ಯಮದ ಅಲೆಯಲ್ಲಿ ಗೆದ್ದಿದ್ದಾರೆ ಎಂದು ಕಾರ್ಮಿಕ ಸಚಿವ‌ ಸಂತೋಷ ಲಾಡ್ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ಕೈಹಿಡಿದಿವೆ. ಈ ಬಾರಿಯ ಚುನಾವಣೆಯಲ್ಲಿ ಮೋದಿ ಅವರ ಗೆಲುವು ಕೇವಲ ೧.೫೦ ಲಕ್ಷದಿಂದ ಆಗಿದೆ. ಅದನ್ನು ಗಮನಿಸಬೇಕು ಎಂದರು.
ಈ ಚುನಾವಣೆಯಲ್ಲಿ ಜೋಶಿ ವರ್ಸಸ್ ಲಾಡ್ ಅಂತ ಅಲ್ಲ ಬದಲಿಗೆ ಜೋಶಿ ವರ್ಸಸ್ ಕಾಂಗ್ರೆಸ್ ಅಂತ ಫೈಟ್ ಕೊಟ್ಟಿದ್ದೇವು. ಲೋಕಸಭಾ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಆಗಿದೆ. ಆದರೆ ಕಳೆದ ಬಾರಿಯೂ ಲೀಡ್ ಆಗಿತ್ತು. ನಾವು ಮಾತ್ರ ಪ್ರಾಮಾಣಿಕವಾಗಿ ಫೈಟ್ ಕೊಟ್ಟಿದ್ದೇವೆ ಎಂದರು.

Previous article13 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಪ್ರಕಟ
Next articleಸತತ 23ನೇ ಬಾರಿ ಉದ್ಯಮಿ ಗುಪ್ತಾಗೆ ರಫ್ತುದಾರ ಪ್ರಶಸ್ತಿ