ಮಾದಕ ವ್ಯಸನದ ವಿರುದ್ಧ ಹುಬ್ಬಳ್ಳಿಯಲ್ಲಿ ಬೈರತಿ ರಣಗಲ್ ಗುಡುಗು

0
29


ಹುಬ್ಬಳ್ಳಿ: ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ ಅವರು ಹು-ಧಾ ಅವಳಿ ನಗರದ ಕೆಎಲ್ ಇ ಸಂಸ್ಥೆಯ ಬಿವಿಬಿ ವಿದ್ಯಾಸಂಸ್ಥೆಯಲ್ಲಿ ‘ಮಾದಕ ವಸ್ತುಗಳ ನಿರ್ಮೂಲನಾ ಜಾಗೃತಿ ಅಭಿಯಾನ’ದಲ್ಲಿ ಭಾಗವಹಿಸಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ‌ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಾಮೂಲ್ಯವಾದದ್ದು, ವಿದ್ಯಾರ್ಥಿಗಳು ಮಾದಕ ವ್ಯಸನಗಳಿಗೆ ಅಂಟಿಕೊಳ್ಳದೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಶಬ್ದವೇದಿ ಸಿನಿಮಾದಲ್ಲಿ ಮಾದಕ ವ್ಯಸನದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಜೀವನ ಅತ್ಯಾಮೂಲ್ಯವಾದದ್ದು, ನಶೆಯನ್ನು ಓದುವುದರಲ್ಲಿ, ಗೆಳೆತನ, ಸಂಬಂಧಗಳಲ್ಲಿ ಹುಡುಕಿ, ಆದರೆ ಈ ವಸ್ತು ಬೇಡ. ಬದುಕುವ ರೀತಿಯಲ್ಲಿ ನಶೆ ಹುಡುಕೋಣ ಎಂದರು.
ತಂದೆ ತಾಯಿ ಮಕ್ಕಳ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ದಾರಿ ತಪ್ಪುವ ಸ್ನೇಹಿತರ ಬಗ್ಗೆ ಹಾಳಾಗೋಕೆ‌ಬಿಡಬೇಡಿ. ಬದಲಾಯಿಸಿ ಎಂದರು.
ಅಭಿಮಾನಿಗಳನ್ನು ಸ್ನೇಹಿತರಾಗಿ ನೋಡುತ್ತೇನೆ. ಹುಬ್ಬಳ್ಳಿಗೆ ಬಂದಾಗ ಕಾಲೇಜ ಕಾರ್ಯಕ್ರಮ ಮಿಸ್ ಮಾಡಲ್ಲ. ಆನಂದ ರಿಲೀಸ್ ಆದಾಗ ಕೂಡ ಕಾಲೇಜಿಗೆ ಬಂದಿದೆ. ವಿದ್ಯಾರ್ಥಿಗಳನ್ನು ನೋಡಿದಾಗ ಕಾಲೇಜ್ ದಿನ ನೆನಪಾಗುತ್ತದೆ ಎಂದರು.
ನಂತರ ಇಲ್ಲಿಂದ ಧಾರವಾಡದ ಜೆಎಸ್‌ಎಸ್ ಕಾಲೇಜ್, ಕೆಸಿಡಿ ಕಾಲೇಜ್‌ನಲ್ಲಿ ಆಯೋಜಿಸಿರುವ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಲೇಜಿನ ಪ್ರೋ ಚಾನ್ಸಲರ್ ಅಶೋಕ ಶೆಟ್ಟರ್, ಗೀತಾ ಶಿವರಾಜಕುಮಾರ, ಡಾ.ಶಿವರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಡಿಸಿಪಿಗಳಾದ ಮಗಾನಿಂಗ ನಂದಗಾವಿ, ರವೀಶ್ ಸಿ.ಆರ್., ಎಸಿಪಿಗಳು ಇದ್ದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಯುವಕರು ನೆಚ್ಚಿನ‌ನಟ ಶಿವರಾಜಕುಮಾರ ಕಂಡು ಕೇಕೆ ಚಪ್ಪಾಳೆ ಹಾಕಿದರು.

Previous articleರಾಯಚೂರು ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು
Next articleಆಸ್ಪತ್ರೆಗೆ ದಾಖಲಾದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌