ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಬಿಜೆಪಿಗೆ

0
24
ಕಿರಣ ಕುಮಾರ

ಹೈದರಾಬಾದ್: ಮಾಜಿ ಮುಖ್ಯಮಂತ್ರಿ ನಲ್ಲಾರಿ ಕಿರಣ್ ಕುಮಾರ್ ರೆಡ್ಡಿ ಶೀಘ್ರದಲ್ಲೇ ಬಿಜೆಪಿ ಸೆರಲಿದ್ದಾರೆ. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದು, ಬಳಿಕ ದೆಹಲಿಯಲ್ಲಿ ಬಿಜೆಪಿಯ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ. ಕಿರಣ್ ಕುಮಾರ್ ರೆಡ್ಡಿ ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ಪಕ್ಷದಿಂದ ದೂರ ಉಳಿದಿದ್ದರು.
ರಾಜ್ಯ ವಿಭಜನೆಯ ಯುಪಿಎ ನಿರ್ಧಾರವನ್ನು ವಿರೋಧಿಸಿದ ಕಿರಣ್ ಕುಮಾರ್ ಅವರು ಸಿಎಂ ಸ್ಥಾನಕ್ಕೆ ಮತ್ತು ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 2014 ರ ಚುನಾವಣೆಯಲ್ಲಿ ಅವರು ಹೊಸದಾಗಿ ರಚಿಸಲಾದ ಪಕ್ಷವಾದ ಸಮೈಕ್ಯ ಆಂಧ್ರ ಪಕ್ಷದಿಂದ ಸ್ಪರ್ದಿಸಿ ಸೋಲನ್ನುಂಡು ಕಾಂಗ್ರೆಸ್‌ಗೆ ಮರಳಿದ್ದರು. ಕಳೆದ ಕೆಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿಲ್ಲದ ಅವರು ಈಗ ಬಿಜೆಪಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

Previous articleಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಂಸದ ಧೃವನಾರಾಯಣ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ
Next articleವಾಣಿಜ್ಯನಗರಿಯಲ್ಲಿ ಬಣ್ಣದಬ್ಬದ ಸಡಗರ