ಮಾಜಿ ಸಚಿವ ವೀರಕುಮಾರ ಪಾಟೀಲ ಪುತ್ರ ಪ್ರೀತಮ್ ಬಂಧನ

0
41

ಚಿಕ್ಕೋಡಿ: ಮಾಜಿ ಸಚಿವ ವೀರಕುಮಾರ ಪಾಟೀಲ ಅವರ ಪುತ್ರ ಪ್ರೀತಮ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಡಿ ಗ್ರಾಮದವಾಗಿರುವ ಕೊಗನೊಳ್ಳಿ ಗ್ರಾಮದ ನಿವಾಸಿಯಾಗಿರುವ ಪ್ರೀತಮ್. ವೈಷ್ಣವಿ ಹಗವಣೆ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ವೈಷ್ಣವಿ ಮಾವ ರಾಜೇಂದ್ರ, ಮೈದುನ ಸುಶೀಲ್‌ಗೆ ಆಶ್ರಯ ಹಾಗೂ ಆರ್ಥಿಕ ಸಹಾಯ ಆರೋಪದಡಿ ಪ್ರೀತಮ್‌ನನ್ನು ಬಂಧಿಸಲಾಗಿದೆ. ಕೊಲೆ ಆರೋಪಿಗಳು ಅಜೀತ ಪವಾರ ಬಣದ ಎನ್‌ಸಿಪಿ ಪಕ್ಷದ ಮುಖಂಡರಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ವೈಷ್ಣವಿ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ,

Previous articleಅರಣ್ಯ ಇಲಾಖೆ ರಾಯಭಾರಿಯಾಗಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ
Next articleನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ