ಮಂಗಳೂರು: ಬಂಟ್ವಾಳ ಬಾಕ್ರಬೈಲು ನಿವಾಸಿ, ಮಾಜಿ ಸಚಿವ ಬಿ.ಸುಬ್ಬಯ್ಯ ಶೆಟ್ಟಿ (೯೧) ಅವರು ಮಾ.೧೦ ರಂದು ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಇವರು ೧೯೭೨ ಮತ್ತು ೧೯೭೮ ಈ ಎರಡು ಅವಧಿಯಲ್ಲಿ ಸುರತ್ಕಲ್ ಶಾಸಕರಾಗಿ, ಮುಖ್ಯಮಂತ್ರಿ ದೇವರಾಜ್ ಅರಸು ಅವರ ಸಚಿವ ಸಂಪುಟದಲ್ಲಿ ಭೂ ಸುಧಾರಣಾ ಸಚಿವರಾಗಿ , ಶಿಕ್ಷಣ ಸಚಿವರಾಗಿದ್ದರು.
ತನ್ನ ವಿದ್ಯಾಭ್ಯಾಸವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದಿರುವ ಇವರು, ಬಳಿಕ ಕಾನೂನು ಪದವಿಯನ್ನು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡಿದ್ದರು.
ನಂತರ ಸಿಬಿಐ ಹುದ್ದೆಗೆ ನೇಮಕಗೊಂಡು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಕರ್ತವ್ಯ ಸಲ್ಲಿಸಿದ್ದರು. ನಂತರ ಕಾರಣಾಂತರಗಳಿಂದ ಸಿಬಿಐ ಹುದ್ದೆಯನ್ನು ತ್ಯಜಿಸಿದ್ದ ಇವರು ಕಾನೂನು ಸೇವೆಯನ್ನು
ಮುಂದುವರೆಸಿದ್ದರು. ಬಳಿಕ ಇವರು ಶಾಸಕರಾಗಿ, ಸಚಿವರಾಗಿ ಸುಮಾರು ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಇವರ ಸಾಧನೆಗೆ ಡಿ.ದೇವರಾಜ ಅರಸ್ ಪ್ರಶಸ್ತಿ, ಶಾಂತವೆರಿ ಗೋಪಾಲ ಅವಾರ್ಡ್ ಮತ್ತು ಡಾ.ದ.ರಾ ಬೇಂದ್ರೆ ಈ ಮೊದಲಾದ ಪ್ರಶಸ್ತಿಗಳು ದೊರೆತಿವೆ.
ಮೃತರು ಮಕ್ಕಳಾದ ಉಮಾ ಸವಣೂರು ಮತ್ತು ರೇಷ್ಮಾ ಸವಣೂರು ಅವರನ್ನು ಅಗಲಿದ್ದಾರೆ.