ಬಳ್ಳಾರಿ: ರಾಜ್ಯ ವಾಲ್ಮೀಕಿ ನಿಗಮದಲ್ಲಿನ ೧೮೭ ಕೋಟಿ ರೂ ಹಗರಣದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಬಿ.ನಾಗೇಂದ್ರರನ್ನು ಜು.೧೮ರವರೆಗೆ ಇಡಿ ವಶಕ್ಕೆ ನೀಡಲಾಗಿದೆ.
ಬೆಳಗ್ಗೆ ನ್ಯಾಯಾಧೀಶರ ಮುಂದೆ ನಾಗೇಂದ್ರ ರನ್ನು ಹಾಜರುಪಡಿಸಿದ ಇಡಿ ಅಧಿಕಾರಿಗಳು ವಾಲ್ಮೀಕಿ ನಿಗಮದಲ್ಲಿ ನಡೆದಿರುವ ೧೮೭ ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಹಣ ವರ್ಗಾವಣೆ, ನಕಲಿ ಖಾತೆಗಳ ಸೃಷ್ಟಿ, ಬೇನಾಮಿ ಹೆಸರಿನಲ್ಲಿನ ಆಸ್ತಿ, ಹವಾಲ ಹಣ ಸಾಗಣೆಯ ಸಾಕ್ಷ್ಯಗಳನ್ನು ಜಡ್ಜ್ ಮುಂದೆ ಇಟ್ಟು ಹೆಚ್ಚಿನ ವಿಚಾರಣೆಗೆ ೧೪ ದಿನಗಳ ಕಾಲ ವಶಕ್ಕೆ ಅಗತ್ಯವಿದೆ ಎಂದು ಇಡಿ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಜಡ್ಜ್ ಜು.೧೮ರವರೆಗೆ ೬ ದಿನಗಳಕಾಲ ನಾಗೇಂದ್ರರನ್ನು ಇಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.