ಮಾಜಿ ಡಿಸಿಎಂ ದಿ. ಎಂ.ಪಿ. ಪ್ರಕಾಶ್ ಪತ್ನಿ ರುದ್ರಾಂಬ ನಿಧನ

0
13

ಬಳ್ಳಾರಿ(ಹೂವಿನಹಡಗಲಿ): ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ ಅವರ ಧರ್ಮಪತ್ನಿ ಎಂ.ಪಿ. ರುದ್ರಾಂಬ ಪ್ರಕಾಶ್(೮೩) ಇಂದು ನಿಧನರಾದರು.
ಕಳೆದ ಕೆಲ ತಿಂಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಮೃತರಿಗೆ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ, ರಂಗಭಾರತಿ ಅಧ್ಯಕ್ಷೆ ಎಂ.ಪಿ. ಸುಮಾ, ಎಂ.ಪಿ. ವೀಣಾ ಸೇರಿ ಮೂವರು ಪುತ್ರಿಯರು ಅಪಾರ ಬಂಧು-ಬಳಗ ಇದ್ದಾರೆ. ಮಂಗಳವಾರ ಮಧ್ಯಾಹ್ನ ೩ ಗಂಟೆಗೆ ಪಟ್ಟಣದ ಎಂ.ಪಿ.ಪ್ರಕಾಶ್ ಸಮಾಧಿ ಬಳಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲ ತಿಳಿಸಿವೆ.

Previous articleಸಾಮಾನ್ಯ ಜನರ ಬದುಕು ಸಂಕಷ್ಟಕ್ಕೀಡಾಗಿದೆ
Next articleಮೋದಿ ಪರ ಸುನಾಮಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ