ಮಹಿಳೆ ಮೇಲೆ ಆನೆ ದಾಳಿ: ಸಾವು

0
26

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿ ದೋಣಿಮಡಗು ಗ್ರಾಮ ಪಂಚಾಯಿತಿಗೆ ಸೇರಿರುವ ಸಾಕರಸನಹಳ್ಳಿ ಗ್ರಾಮದ ರೈತ ಮಹಿಳೆ 45 ವರ್ಷದ ಮಂಜುಳಾ ಎಂಬುವರು ಬೆಳಗಿನ ಜಾವ ಬಹಿರ್ದೆಸೆಗೆಂದು ಜಮೀನು ಬಳಿ ತೆರಳಿದ್ದಾಗ ಒಂಟಿ ಆನೆ ದಾಳಿ ಮಾಡಿದ ಪರಿಣಾಮ ಸಾವನ್ನಪ್ಪಿದ್ದಾರೆ.
ಸುಮಾರು ವರ್ಷಗಳಿಂದ ಈ ತರದ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದು ಈ ಬಗ್ಗೆ ರಾಜಕಾರಣಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಸರಿಯಾದ ಕಟ್ಟು ನಿಟ್ಟಿನ ಕ್ರಮಗಳನ್ನ ವಹಿಸಿದೆ, ಬೇಜವಾಬ್ದಾರಿತನದ ವಿರುದ್ಧ ಗಡಿಭಾಗದ ಜನ ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಭೇಟಿ ನೀಡಿ ಮೃತ ಮಹಿಳೆ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದಾರೆ

Previous articleಮರಾಠಿ ಪುಂಡಾಟಿಕೆಗೆ ಕರವೇ ಪ್ರತ್ಯುತ್ತರ
Next articleಫೋಕ್ಸೋ ಪ್ರಕರಣ ದಾಖಲು: ಯುವಕನ ಬಂಧನ