ಮಹಿಳೆ ಮೇಲೆ ಅಮಾನವೀಯ ಹಲ್ಲೆ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಅರ್ಚನಾ ಮಜುಂದಾರ್ ನೇತೃತ್ವದ ತಂಡ ಭೇಟಿ

0
15

ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಮುಸ್ಲಿಂ ಮಹಿಳೆ ಮೇಲೆ ಅಮಾನವೀಯವಾಗಿ ಹಲ್ಲೆ ಪ್ರಕರಣ ಹಿನ್ನಲೆಯಲ್ಲಿ ಸೋಮವಾರ ಚನ್ನಗಿರಿ ತಾಲೂಕಿನ ತಾವರೆಗೆರೆ ಗ್ರಾಮಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು.
ಅರ್ಚನಾ ಮಜುಂದಾರ್ ನೇತೃತ್ವದಲ್ಲಿ ತಂಡದಿಂದ ತಾವರೆಗೆರೆ ಸಂತ್ರಸ್ತೆ ನಿವಾಸಕ್ಕೆ ಭೇಟಿ ನೀಡಿ, ಹಲ್ಲೆಗೊಳಗಾದ ಮಹಿಳೆಯ ಜೊತೆ ಮಹಿಳಾ ಆಯೋಗದ ಸದಸ್ಯರ ತಂಡ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದಿದೆ. ಅನೈತಿಕ ಸಂಬಂಧಕ್ಕೆ ಪ್ರೊತ್ಸಾಹ ನೀಡಿದ್ದಾಳೆ ಎಂಬ ಕಾರಣಕ್ಕಾಗಿ ಮಹಿಳೆಯೊಬ್ಬಳ ಮೇಲೆ ತಾವರೆಕೆರೆ ಗ್ರಾಮದ ಜಾಮೀಯಾ ಮಸೀದಿ ಎದುರಿನ‌ ರಸ್ತೆಯಲ್ಲಿ ಹತ್ತಾರು ಜನ ಸೇರಿ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ, ಪೈಪ್, ವೈರ್, ಕೋಲಿನ ಮೂಲಕ ಹೊಡೆದು ಸಾರ್ವಜನಿಕವಾಗಿ ನಿಂದಿಸಿದ್ದ ಘಟನೆ ದೇಶದ ಗಮನ ಸೆಳೆದಿತ್ತು. ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗದ ಸದಸ್ಯರ ತಂಡ ತಾವರೆಕೆರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ. ರಾಷ್ಟ್ರೀಯ ಮಹಿಳಾ ಅಯೋಗದ ಸದಸ್ಯರ ಜೊತೆ ತಾಲ್ಲೂಕು ಆಡಳಿತ ಕೂಡ ಸಾಥ್ ನೀಡಿದೆ.

ಅಮಾಯಕರನ್ನ ಬಿಡಿ: ಮಹಿಳಾ ಆಯೋಗದ ಸದಸ್ಯೆ ಕಾರಿಗೆ ಅಡ್ಡಗಟ್ಟಿ ಪ್ರತಿಭಟನೆ : ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಅರ್ಚನಾ ಮಜುಂದಾರ್ ಕಾರು ಮುಂಭಾಗದಲ್ಲಿ ಮಹಿಳೆಯರು ಕೂತು ಪ್ರತಿಭಟನೆ ನಡೆಸಿದರು. ಮಹಿಳೆ ಮೇಲೆ ಹಲ್ಲೆ ನಡೆಸಿದ್ದನ್ನು ಸಮರ್ಥಿಸಿಕೊಂಡ ಉಳಿದ ಮಹಿಳೆಯರು,ಆಕೆಯ ಗಂಡ ದೂರು ನೀಡಿದ್ದಾನೆ ಅದಕ್ಕೆ ಮಸೀದಿಯವರು ಕ್ರಮ ಕೈಗೊಂಡಿದ್ದಾರೆ ಎಂದು ವಾದ ಮಾಡಿದರು, ಮಹಿಳೆಯ ಮೇಲೆ ಹಲ್ಲೆ ಪ್ರಕರಣದಲ್ಲಿ ಕೆಲ ಅಮಾಯಕರ ಮೇಲೆ ಕೇಸ್ ದಾಖಲಾಗಿದೆ.‌
ಸಂತ್ರಸ್ಥ ಮಹಿಳೆಯದ್ದು ತಪ್ಪಿದೆ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಕಾರ್ ಗೆ ಅಡ್ಡಗಟ್ಟಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ಮುಸ್ಲಿಂ ಮಹಿಳೆಯರ ಅನಿರೀಕ್ಷಿತ ಪ್ರತಿಭಟನೆಯಿಂದ ತಾವರೆಕೆರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಾ ನಿರತ ಮಹಿಳೆಯರನ್ನು ಪೊಲೀಸರು ಸಮಾಧಾನ ಮಾಡಿ ಕಳುಹಿಸಿದರು. ಆಗ ಪರಿಸ್ಥಿತಿ ಶಾಂತಗೊಂಡಿತು.

Previous articleಪಾಕಿಸ್ತಾನದ ಭಯೋತ್ಪಾದನೆ ಬೆಂಬಲ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಎತ್ತಿ ತೋರಿಸಬೇಕು
Next articleಬಿಜೆಪಿ ನಾಯಕರು ಮೋದಿ ಪ್ರಶ್ನಿಸುವ ಎದೆಗಾರಿಕೆ ತೋರುವರಾ?