ಮಹಿಳೆಯ ಕತ್ತು ಕೊಯ್ದು ಕೊಲೆ

0
9

ಪಾಂಡವಪುರ: ತಾಲೂಕಿನ ಎಲೆಕೆರೆ ಗ್ರಾಮದ ಹೊರವಲಯದಲ್ಲಿ ರೈತ ಮಹಿಳೆಯೊಬ್ಬರ ಕತ್ತು ಕೂಯ್ದು ಬರ್ಬರವಾಗಿ ಕೊಲೆಗೈದ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ಪಾಂಡವಪುರ ತಾಲೂಕಿನ ಎಲೆಕೆರೆ ಗ್ರಾಮದ ಸ್ವಾಮಿಗೌಡರ ಪತ್ನಿ ಪಾರ್ವತಿ(56) ಕೊಲೆಯಾದ ರೈತ ಮಹಿಳೆ. ಸೋಮವಾರ ರಾತ್ರಿ ಕುಟುಂಬ ಸಮೇತ ಗ್ರಾಮದ ಹೊರವಲಯದಲ್ಲಿರುವ ದೇವರಿಗೆ ಪೂಜೆ ಮಾಡಿ ಬರುವಾಗ ಒಬ್ಬಳೇ ಬರುವುದನ್ನು ಗಮನಿಸಿದ ದುಷ್ಕರ್ಮಿಯೊಬ್ಬ ಮುಖಕ್ಕೆ ಮಂಕಿಟೋಪಿ ಧರಿಸಿಕೊಂಡು ಮಹಿಳೆಯ ಹಿಂಬದಿಯಿಂದ ಹಿಡಿದು ಕತ್ತು ಕೊಯ್ದು ಪರಾರಿಯಾಗಿದ್ದಾನೆ.
ತಕ್ಷಣ‌ ಮಹಿಳೆಯ ಪುತ್ರಿ ಹರ್ಷಿತ ಹಾಗೂ ಕುಟುಂಬಸ್ಥರು ಮಹಿಳೆಯನ್ನು ಮೈಸೂರು ಕೆ.ಆರ್.ಎಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರಕರಣ ನಡೆದ ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Previous articleನವಜಾತ ಶಿಶುವಿನ ಕಳೆಬರ ಪತ್ತೆ
Next articleಹೊರನಾಡ ಕನ್ನಡಿಗರಿಂದ ಹರಡಿದ ಕನ್ನಡದ ಕಂಪು