ಮಹಿಳೆಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಅರ್ಚಕನ ಬಂಧನ

0
55

ಬೆಂಗಳೂರು: ಪೂಜೆ ಮಾಡಿಸಲೆಂದು ಕೇರಳದ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಗೆ ಮಾಟ ಮಾಂತ್ರದ ಬೆದರಿಕೆಯೊಡ್ಡಿ ಅಸಭ್ಯ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಮಾಡಿದ ಆರೋಪದಲ್ಲಿ ಕೇರಳದ ಅರ್ಚಕ ಅರುಣ್ ಎಂಬಾತನನ್ನು ಬೆಂಗಳೂರಿನ ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಪೂಜೆ ಮಾಡಿಸಲೆಂದು ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಗೆ ಮಾಟ ಮಾಂತ್ರದ ಬೆದರಿಕೆಯೊಡ್ಡಿ ಮುಖ್ಯ ಅರ್ಚಕ ಹಾಗೂ ಅರ್ಚಕ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪೂಜೆಯ ಹೆಸರಿನಲ್ಲಿ ಮತ್ತು ಮಾಟ-ಮಂತ್ರ ಹೆಸರಿನಲ್ಲಿ ಮಹಿಳೆ ಜತೆ ವಾಟ್ಸ್​​ಆ್ಯಪ್​ ವಿಡಿಯೋ ಕಾಲ್ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಂದು ಪೂಜೆ ಮಾಡಿಸುವುದಾಗಿ ಕರೆಸಿಕೊಂಡು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಬೆಳ್ಳಂದೂರು ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ಮಹಿಳೆ ಉಲ್ಲೇಖಿಸಿದ್ದಾರೆ.

Previous articleಅಪಘಾತ: ಇಬ್ಬರು ಸಾವು
Next articleರೈತನ ಮೇಲೆ ಕರಡಿ ದಾಳಿ