ಬೆಂಗಳೂರು: ಮಹಿಳಾ ದಿನಾಚರಣೆ ವಿಶೇಷವಾಗಿ ನಟಿ ಸೋನಾಕ್ಷಿ ಸಿನ್ಹಾ ಅವರ ಮುಂಬರುವ ತೆಲುಗು ಚಿತ್ರ ‘ಜಟಾಧಾರ’ದ ಪೋಸ್ಟರ್ ಅನಾವರಣಗೊಂಡಿದೆ.
ಮಹಿಳಾ ದಿನಾಚರಣೆಯಂದು ಫಸ್ಟ್ ಲುಕ್ ಬಿಡುಗಡೆಯಾಗಿದ್ದು ನಟಿ ಸೋನಾಕ್ಷಿ ಸಿನ್ಹಾ ‘ಜಟಾಧಾರ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಕುರಿತಂತೆ ನಟಿ ಸೋನಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ರ ಹಂಚಿಕೊಂಡಿದ್ದು ಈ ಮಹಿಳಾ ದಿನದಂದು #ಜಟಾಧಾರದಲ್ಲಿ ಶಕ್ತಿ ಮತ್ತು ಶಕ್ತಿಯ ದೀಪವು ಉದಯಿಸುತ್ತದೆ ಎಂದಿದ್ದಾರೆ.