ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟ: ಕನ್ನಡ ನಾಮಫಲಕಕ್ಕೆ ಬೆಂಕಿ ಹಚ್ಚಿ ಆಕ್ರೋಶ

0
14

ಚಿಕ್ಕೋಡಿ: ಕರ್ನಾಟಕ ಸರಕಾರ ರಾಜ್ಯದಲ್ಲಿ ಕನ್ನಡ ನಾಮಫಲಕ ಅಳವಡಿಸುವ ಕುರಿತು ಕರ್ನಾಟಕದಲ್ಲಿ ತಗಾದೆ ತೆಗೆಯುತ್ತಿರುವ ಕಿಡಿಗೇಡಿಗಳು ಈಗ ಮಹಾರಾಷ್ಟ್ರದಲ್ಲಿ ತಗಾದೆ ಶುರು ಮಾಡಿದ್ದಾರೆ. ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಈಗ ಕೊಲ್ಲಾಪುರದಲ್ಲಿರುವ ಕನ್ನಡ ನಾಮಫಲಕ ಕಿತ್ತು ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ಉದ್ದವ ಠಾಕ್ರೆ ಶಿವಸೇನೆ ಬಣದ ಕಾರ್ಯಕರ್ತರು ಬೆಳಗಾವಿ ಪಕ್ಕದ ಕೊಲ್ಲಾಪುರದಲ್ಲಿ ಕನ್ನಡ ನಾಮಫಲಕ ಕಿತ್ತು ಬೆಂಕಿ ಹಚ್ಚಿದ್ದಾರೆ. ಬೆಳಗಾವಿಯಲ್ಲಿ ಮರಾಠಿ ನಾಮಫಲಕ ತೆಗೆದಿದ್ದಾರೆ. ಕರ್ನಾಟಕ ಮರಾಠಿಗರ ಮೇಲೆ ದಾದಾಗಿರಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ಮಹಾರಾಷ್ಟ್ರ ಸೇರಲಿದೆ. ಮಹಾರಾಷ್ಟ್ರದಲ್ಲಿ ಮರಾಠಿ ಜೊತೆಗೆ ಇಂಗ್ಲಿಷ್ ಬೋರ್ಡ್ ಹಾಕಲಿ ಕನ್ನಡ ಬೋರ್ಡ್ ಹಾಕಬಾರದು ಎಂದು ಕೊಲ್ಲಾಪುರ ಶಿವಸೇನೆ ಮುಖಂಡ ಸಂಜಯ್ ಪವಾರ್ ಉದ್ದಟತನದ ಮೆರೆದಿದ್ದಾರೆ.

Previous articleಹೃದಯಾಘಾತದಿಂದ ಕ್ರೀಡಾಂಗಣದಲ್ಲಿ ಪಶುವೈದ್ಯ ಸಾವು
Next articleಹೃದಯಾಘಾತದಿಂದ ಕ್ರೀಡಾಂಗಣದಲ್ಲಿ ಪಶುವೈದ್ಯ ಸಾವು