ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಘಡ

0
26

ಉತ್ತರಪ್ರದೇಶದ: ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಘಡ ಸಂಭವಿಸಿದೆ.
ಮಹಾ ಕುಂಭಮೇಳದಲ್ಲಿ 3ನೇ ಬಾರಿಗೆ ಅಗ್ನಿ ಅವಘಡ ಸಂಭವಿಸಿದ್ದು. ಕಳೆದ ಜನವರಿ 30 ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಕನಿಷ್ಠ 15 ಟೆಂಟ್‌ಗಳು ಭಸ್ಮವಾಗಿದ್ದವು. ಇಂದು 3ನೇ ಬಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಶಂಕರಾಚಾರ್ಯ ಮಾರ್ಗದ ಸೆಕ್ಟರ್ 18ರ ಯಮುನಾಪುರಂ ವಲಯದಲ್ಲಿ ಈ ದುರಂತ ನಡೆದಿದೆ ಎಂದು ವರದಿಯಾಗಿದೆ. ಸೆಕ್ಟರ್‌ 18ರ‌ ತುಳಸಿ ಚೌರಾಹಾ ಬಳಿಕ ಕ್ಯಾಂಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Previous articleಕರ್ನಾಟಕ ವೈಭವಕ್ಕೆ ಉಪರಾಷ್ಟ್ರಪತಿಯಿಂದ ಚಾಲನೆ
Next articleಮಹಾ ಕುಂಭಮೇಳಕ್ಕೆ ಹೊರಟಿದ್ದ ಬೆಳಗಾವಿಯ ನಾಲ್ವರ ಸಾವು