ಮಹಾಕುಂಭದಲ್ಲಿ ಕಾಲ್ತುಳಿತ: ಸಿಎಂ ಯೋಗಿ ಆದಿತ್ಯನಾಥ್‌ ಪ್ರತಿಕ್ರಿಯೆ

0
13

ಉತ್ತರ ಪ್ರದೇಶ: ಪ್ರಯಾಗ್‌ರಾಜ್‌ನಲ್ಲಿ ಆಯೋಜನೆಯಾಗಿರುವ ಮಹಾ ಕುಂಭ ಮೇಳದಲ್ಲಿ ಬುಧವಾರ ಬೆಳಗಿವಜಾವ ಕಾಲ್ತುಳಿತ ಸಂಭವಿಸಿದ ಘಟನೆ ನಡೆದಿದೆ.
ಈ ದುರ್ಘಟನೆಯಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಈಗ ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಹಾಗೂ ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಪ್ರಸ್ತುತ ನಗರದಲ್ಲಿ ಸುಮಾರು 10 ಕೋಟಿ ಜನರು ಇದ್ದಾರೆ ಎಂದು ಹೇಳಿದರು. ‘ಮುಖ್ಯ ಸಂಗಮಕ್ಕೆ ಹೋಗುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಆಡಳಿತವಿದೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಘಟನಾ ಸ್ಥಳದ ಮೇಲೆ ನಿಗಾ ಇಟ್ಟಿದ್ದು, ಬೆಳಗ್ಗೆಯಿಂದ ನಾಲ್ಕು ಬಾರಿ ಕರೆ ಮಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಕರೆ ಮಾಡಿದ್ದಾರೆ ಎಂದು ಸಿಎಂ ಯೋಗಿ ತಿಳಿಸಿದ್ದಾರೆ. ಬೆಳಗಿನಜಾವದಿಂದಲೂ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಾಲ್ಕು ಬಾರಿ ಫೋನ್‌ ಕರೆಯಲ್ಲಿ ಮಾತುಕತೆ ನಡೆಸಲಾಗಿದೆ. ಪ್ರಯಾಗ್‌ರಾಜ್‌ಗೆ 8-10 ಕೋಟಿ ಭಕ್ತಾದಿಗಳು ಬಂದಿದ್ದಾರೆ. ಸಂಗಮದ ತುದಿಗೆ ಎಲ್ಲರೂ ಸಾಗುತ್ತಿರುವುದರಿಂದ ಅಲ್ಲಿ ಒತ್ತಡ ಸೃಷ್ಟಿಯಾಗಿದೆ. ಅಖಾಡ ಮಾರ್ಗದಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಡಲು ಪ್ರಯತ್ನಿಸುತ್ತಿರುವಾಗ ಕೆಲವು ಭಕ್ತರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೌನಿ ಅಮಾವಾಸ್ಯೆಯ ಪ್ರಯುಕ್ತ ಮಂಗಳವಾರ ರಾತ್ರಿಯಿಂದಲೇ ಹೆಚ್ಚಿನ ಜನರು ಮಹಾ ಕುಂಭ ಮೇಳಕ್ಕೆ ಬಂದು ಸೇರಿದ್ದಾರೆ” ಎಂದರು.

ವದಂತಿಗಳಿಗೆ ಕಿವಿಗೊಡದಂತೆ ಮನವಿ: ಸುಮಾರು 20 ಕಿಲೋ ಮೀಟರ್‌ ಸುತ್ತಲೂ ಘಾಟ್‌ ನಿರ್ಮಿಸಲಾಗಿದೆ. ಸಂಗಮದಲ್ಲಿಯೇ ಬಂದು ಸ್ನಾನ ಮಾಡಬೇಕು ಅನ್ನೋದು ಇಲ್ಲ. ಎಲ್ಲವೂ ಗಂಗಾ ನದಿಯು ಹರಿಯುತ್ತಿರುವ ಪ್ರದೇಶವೇ ಆಗಿದೆ. ನಿಮಗೆ ಹತ್ತಿರದಲ್ಲಿಯೇ ಇರುವ ಘಾಟ್‌ಗಳಲ್ಲೇ ಪುಣ್ಯ ಸ್ನಾನ ಮಾಡುವಂತೆ ಸಲಹೆ ಮಾಡಿದ್ದಾರೆ.

Previous articleಹಿರಿಯ ಪತ್ರಕರ್ತ ಪ್ರಕಾಶ ಜೋಶಿ ನಿಧನ
Next articleನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಕಾರು: ಪರಿಶೀಲನೆ ವೇಳೆ 1 ಕೋಟಿ ರೂ ಪತ್ತೆ!