ಮಳೆಗೆ ಉರುಳಿ ಬಿದ್ದ ಹಂಪಿ ಸಾಲು ಮಂಟಪ

0
8

ಹೊಸಪೇಟೆ: ವಿಜಯನಗರ ಜಿಲ್ಲಾದ್ಯಾಂತ ಸೋಮವಾರ ರಾತ್ರಿ‌ ಸುರಿದ‌ ಮಳೆಗೆ ವಿಶ್ವವಿಖ್ಯಾತ ಹಂಪಿಯ ಎರಡು ಸಾಲು ಮಂಟಪದ ಕಲ್ಲುಗಳು ಉರುಳಿ ಬಿದ್ದಿವೆ.
ಹಂಪಿಯ ರಥ ಬೀದಿಯಲ್ಲಿರುವ ಸಾಲು‌ ಮಂಟಪದ‌ ಬೃಹತ್ ಕಲ್ಲು ಕಂಬಗಳು ಉರುಳಿ ಬಿದ್ದಿವೆ. ವಿಜಯನಗರ ಸಾಮ್ರಾಜ್ಯದ ಅರಸರು ಈ‌ ಸಾಲು ಮಂಟಪಗಳು‌ ನಿರ್ಮಾಣ ಮಾಡಿದ್ದರು. ಸ್ಮಾರಕಗಳ ರಕ್ಷಣೆಗಾಗಿ ಲಕ್ಷಾಂತರ ರೂ. ಅನುದಾನ ಬರುತ್ತಿದ್ದರೂ‌ ನಿರ್ವಹಣೆ‌ ಕೊರತೆಯಿಂದ‌ ಮಂಟಪದ ಕಲ್ಲುಗಳು ಉರುಳಿ ಬಿದ್ದಿವೆ. ಯುನೆಸ್ಕೋ ಪಟ್ಟಿಗೆ ಸೇರಿದ ಹಂಪಿಯ ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಇಲ್ಲದಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸ್ಮಾರಕ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Previous articleರೈಲ್ವೆ ನಿಲ್ದಾಣ, ರೈಲಿನಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ; ನೈಋತ್ಯ ರೈಲ್ವೆ
Next articleಸಿಡಿಲು ಬಡಿದು ಯುವಕ ಸಾವು