ಮಳಖೇಡದ ಕೋಟೆಯ ಗೋಡೆ ಕುಸಿತ

0
33

ಸೇಡಂ: ಸೇಡಂ ತಾಲೂಕಿನ ಮಳಖೇಡದ ರಾಷ್ಟ್ರಕೂಟರ ಕೋಟೆಯ ಗೋಡೆ ಕುಸಿದಿದೆ,
ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗನ ರಾಜಧಾನಿಯಾಗಿದ್ದ ಮಳಖೇಡ ಗ್ರಾಮದ ಈ ಕೋಟೆ 2018 ರಲ್ಲಿ ಅಂದಾಜು 6 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿತ್ತು. ನಿನ್ನೆ ಶುಕ್ರವಾರ ರಾತ್ರಿಯಿಂದ ಸುರಿದ ಮಳೆಯಿಂದಾಗಿ ಶನಿವಾರ ಬೆಳಗಿನ ಜಾವದಲ್ಲಿ ಕೋಟೆಯ ಗೋಡೆ ಕುಸಿದಿದೆ. ಗೋಡೆ ಕುಸಿಯುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ, ಕೋಟೆ ಗೊಡೆ ಕುಸಿದಿದ್ದರಿಂದ ಅಕ್ಕ ಪಕ್ಕದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

Previous articleಮಧುರೈ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ
Next articleಹಲಾಲ್ ಮುಕ್ತ ಗಣೇಶ ಹಬ್ಬ ಆಚರಣೆಗೆ ಮುತಾಲಿಕ್ ಕರೆ