ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸುವ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ನಾಗರಿಕರಿಂದ ಸಲಹೆ ಮತ್ತು ಮಾಹಿತಿಯನ್ನು ಆಹ್ವಾನಿಸಿದ್ದಾರೆ.
ಈ ತಿಂಗಳ 30 ರಂದು ಪ್ರಸಾರವಾಗಲಿರುವ #MannKiBaat ಕಾರ್ಯಕ್ರಮಕ್ಕಾಗಿ ಮನ್ ಕೀ ಬಾತ್ ಕುರಿತು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಸಲ್ಲಿಸ ಬಯಸುವವರು ಟೋಲ್-ಫ್ರೀ ಸಂಖ್ಯೆ 1800-11-7800ಗೆ ಕರೆ ಮಾಡಬಹುದು. ಇಲ್ಲವೇ ಪ್ರಧಾನಿಯವರ MyGov ಅಪ್ಲಿಕೇಷನ್ ಮೂಲಕ ಅನಿಸಿಕೆ ಹಂಚಿಕೊಳ್ಳಬಹುದಾಗಿದೆ.