ಮನೆಗೆ ತಡೆಗೋಡೆ ಬಿದ್ದು ಬಾಲಕಿ ಮೃತ್ಯು: ಹಲವು ಮನೆಗಳು ಜಲಾವೃತ, ಸ್ಥಳಾಂತರ

0
10

ಉಳ್ಳಾಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಗೆ ಬಾಲಕಿ ಯೊಬ್ಬಳು ಮೃತ ಪಟ್ಟ ಘಟನೆ ಬೆಳ್ಮ ಗ್ರಾಮ ದ ಕಾನಕರೆ ಎಂಬಲ್ಲಿ ನಡೆದಿದೆ.
ಮೃತ ಮಗುವನ್ನು ನೌಶಾದ್ ರ ಪುತ್ರಿ ಫಾತಿಮಾ ನಯೀಮ(10) ಎಂದು ಗುರುತಿಸಲಾಗಿದೆ. ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಜರಿದು ಬಿದ್ದಿದ್ದು, ಮನೆಯ ಕೊಠಡಿ ಯ ಕಿಟಕಿ ಬಾಲಕಿಯ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ.
ಮೊಂಟೆ ಪದವು ನಲ್ಲಿ ಗುಡ್ಡ ಜರಿದು ಮೂವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಸ್ಥಳೀಯರು ನೀಡಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು , ಜನ ಜೀವನ ಅಸ್ತವ್ಯಸ್ತ ಗೊಂಡಿದೆ. ಕುಂಪಲ, ಕಲ್ಲಾಪು, ಧರ್ಮ ನಗರ, ಉಚ್ಚಿಲ, ತಲಪಾಡಿ , ವಿದ್ಯಾನಗರ , ಕಲ್ಕಟ್ಟ ಮುಂತಾದ ಕಡೆ ಗಳಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು ಮನೆಯೊಳಗೆ ನೀರು ನುಗ್ಗಿದೆ. ಬಹಳಷ್ಟು ಕುಟುಂಬಗಳು ರಾತ್ರಿ ವೇಳೆ ಬೇರೆಡೆ ಸ್ಥಳಾಂತರ ಗೊಂಡಿದೆ.ಕಲ್ಲಾಪುವಿನಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ . ತಲಪಾಡಿ ಯಲ್ಲಿ ಒಂದು ಮನೆಗೆ ನೀರು ನುಗ್ಗಿ ಹಾನಿಯಾಗಿದೆ.ಈ ಕುಟುಂಬ ವನ್ನು ರಾತ್ರಿ ವೇಳೆ ಸ್ಥಳಾಂತರ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್, ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ, ಗ್ರಾಮಕರಣಿಕ ಸುರೇಶ್ ಮತ್ತಿತರರು ರಾತ್ರಿ ವೇಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Previous articleಭೀಕರ ಅಪಘಾತ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ- ಮೂವರು ಸಾವು
Next articleಕರ್ತವ್ಯ ಲೋಪ ಆರೋಪ: ಪುರಸಭೆ ಮುಖ್ಯಾಧಿಕಾರಿ ಅಮಾನತು