ಹುಬ್ಬಳ್ಳಿ: ಓದು ತಲೆಗೆ ಹತ್ತಲಿಲ್ಲ ಎಂದು ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗಶೆಟ್ಟಿಕೊಪ್ಪದಲ್ಲಿ ನಡೆದಿದೆ.
ನಾಗಶೆಟ್ಟಿಕೊಪ್ಪದ ಉದಯನಗರದ ಪ್ರಸಾದ ಹುಲ್ಲಂಬಿ (೧೮) ಮೃತ ಯುವಕ. ಧಾರವಾಡದಲ್ಲಿ ಎನ್ ಟಿಟಿ ಎಫ್ ಮಾಡುತ್ತಿದ್ದ ಯುವಕನಿಗೆ ವಿದ್ಯೆ ತಲೆಗೆ ಹತ್ತದೆ ನೊಂದಿದ್ದನು ಎನ್ನಲಾಗಿದೆ. ಕಳೆದ ರಾತ್ರಿ ಊಟ ಮಾಡಿ ಮಲಗಿದವನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿದ್ಯಾರ್ಥಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆ ಮಾಡಿಕೊಂಡ ಪ್ರಸಾದನ ತಂದೆ ತಾಯಿಯ ಜೊತೆ ಮಾತನಾಡಿ ಅವರಿಗೆ ಧೈರ್ಯವನ್ನು ತುಂಬಿದರು. ಪ್ರಸಾದ ಓದಿನಲ್ಲಿ ಸ್ವಲ್ಪ ವೀಕ್ ಇದ್ದ ಆದರೂ ಧೈರ್ಯದಿಂದ ಇದ್ದ ಎಂದು ತಿಳಿದು ಬಂದಿದೆ. ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.