ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೊಲೆಗೀಡಾದ ನೇಹಾ ಹಿರೇಮಠ ಅವಳನ್ನು ಮತಾಂತರಗೊಳಿಸಿ ಮದುವೆಯಾಗುವ(ಲವ್-ಜಿಹಾದ್) ಯತ್ನ ನಡೆದಿತ್ತು. ಇದಕ್ಕೆ ನೇಹಾ ಒಪ್ಪದೇ ಇದ್ದುದರಿಂದಲೇ ಫಯಾಜ್ ಆಕೆಯನ್ನು ಹತ್ಯೆಗೈದಿದ್ದಾನೆ ಎಂಬುದಾಗಿ ಮೃತಳ ತಂದೆ ನಿರಂಜನ ಹಿರೇಮಠ ತಮಗೆ ಹೇಳಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರವಿವಾರ ಹೇಳಿ ಸಂಚಲನ ಮೂಡಿಸಿದ್ದಾರೆ.
ಕೊಲೆಗೀಡಾದ ಮಗಳು ಫಯಾಜ್ ಜೊತೆ ಯಾವುದೇ ರೀತಿಯ ಸ್ನೇಹವನ್ನು ಹೊಂದಿರಲಿಲ್ಲ ಎಂಬುದಾಗಿ ಮೃತಳ ತಂದೆ ಈ ಹಿಂದೆ ಮಾಧ್ಯಗಳಿಗೆ ಹೇಳಿದ್ದರು.
ಆದರೆ ಕೊಲೆ ಹಿಂದೆ ಲವ್ ಜಿಹಾದ್ ವಾಸನೆ ಇದೆ ಎಂಬುದಾಗಿ ಜೋಶಿ ಮಾತ್ರ ಹತ್ಯೆಯ ಮರುದಿನವೇ ಪ್ರತಿಪಾದಿಸಿದ್ದರು. ಈಗ ಮೃತಳ ತಂದೆಯೊಂದಿಗೆ ಅಧಿಕೃತವಾಗಿ ಮಾತನಾಡಿದ ನಂತರ ಪುನಃ ತಮ್ಮ ಆರೋಪವನ್ನು ಪುಷ್ಟೀಕರಿಸುವ ಹೇಳಿಕೆಯನ್ನು ಕೇಂದ್ರ ಸಚಿವರು ಮಾಧ್ಯಮಗಳಿಗೆ ನೀಡಿದ್ದಾರೆ.