Home Advertisement
Home ತಾಜಾ ಸುದ್ದಿ ಮತದಾನ ವೇಳೆ ಕುಸಿದುಬಿದ್ದು ಅಧಿಕಾರಿ

ಮತದಾನ ವೇಳೆ ಕುಸಿದುಬಿದ್ದು ಅಧಿಕಾರಿ

0
77

ತುರ್ತು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಡಾ.ಹತ್ತೀಕಾಳ

ಧಾರವಾಡ: ಗಾಂಧೀ ನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ 5 ರಲ್ಲಿ ಚುನಾವಣಾ ಮತದಾನ ಕೇಂದ್ರದ ಚುನಾವಣಾ ಅಧಿಕಾರಿ ( ಇಲೆಕ್ಷನ್ ಡ್ಯುಟೀ ) ಮೇಲಿದ್ದ ಶ್ರೀಮತಿ ಮೇಲಿನಮನಿ ಅವರು ಕುಸಿದು ಬಿದ್ದಾಗ ಅಲ್ಲಿಯ ಮತದಾನ ಮಾಡಲು ಬಂದಿದ್ದ ಡಾ. ನಿತಿನ್‌ಚಂದ್ರ ಹತ್ತೀಕಾಳ ಅವರು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಮೇಲಿನಮನಿ ಅವರಿಗೆ ವಾಂತಿ ತಲೆ ಚಕ್ರ ಬರುವುದು ಆಗಿ ಅವರು ಹೊರಗೆ ಬಂದು ಕುಸಿದು ಕುಳಿತಾಗ ಅಲ್ಲಿಯೇ ಸರತಿ ಸಾಲಿನಲ್ಲಿ ಮತ ಚಲಾಯಿಸಲು ನಿಂತ ಡಾ. ನಿತಿನ್‌ಚಂದ್ರ ಹತ್ತೀಕಾಳ ಅವರು ಕೂಡಲೇ ಬಿ.ಪಿ. ಹಾಗೂ ಸಕ್ಕರೆ ಕಾಯಿಲೆ ( BP Blood Sugar ) ಪರೀಕ್ಷಿಸಿ ಚಿಕಿತ್ಸೆ ನೀಡಿದರು. ನಂತರ ತಮ್ಮ ಮತ ಚಲಾಯಿಸಿದರು.