ಮಟ್ಕಾ ದಂಧೆ ವಿರುದ್ಧ ಕಠಿಣ ಕ್ರಮ: 12 ಮಂದಿಯ ಬಂಧನ

ಸಂ.ಕ. ಸಮಾಚಾರ, ಉಡುಪಿ

ಜಿಲ್ಲೆಯಲ್ಲಿ ಮಟ್ಕಾ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಟ್ಕಾ ಪ್ರಕರಣದಲ್ಲಿ ಬಂಧಿತನಾದ ಮಟ್ಕಾ ಬುಕ್ಕಿಯ ಮಾಹಿತಿ ಆಧಾರದಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 12 ಪ್ರಕರಣಗಳು ವರದಿಯಾಗಿದ್ದು, 12 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ಬಂಧಿತರ ವಿವರ ಇಂತಿದೆ.
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯಡ್ಕ ನಿವಾಸಿ ಪ್ರಕಾಶ್ ಮೂಲ್ಯ (43) ಮತ್ತು ಕೊಡವೂರು ನಿವಾಸಿ ರತ್ನಾಕರ ಅಮೀನ್ (48), ಮಣಿಪಾಲ ಠಾಣಾ ವ್ಯಾಪ್ತಿಯ ಬಡಗಬೆಟ್ಟು ನಿವಾಸಿ ನಾಗೇಶ್ (56), ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಕಡ ನಿವಾಸಿ ವಿಜಯ ನಾಯರಿ (50), ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಪೇತ್ರಿ ನಿವಾಸಿ ದಿವಾಕರ ಪೂಜಾರಿ (42), ಮೂಡನಿಡಂಬೂರು ನಿವಾಸಿ ರಾಮರಾಜ್ (44), ಕುಂಜಿಬೆಟ್ಟು ನಿವಾಸಿ ಜಗದೀಶ್ (39), ಅಂಬಾಗಿಲು ನಿವಾಸಿ ಚಿದಾನಂದ (35), ಕೊಡವೂರು ನಿವಾಸಿ ತಿಪ್ಪೇಸ್ವಾಮಿ (52), ಸಂತೆಕಟ್ಟೆ ನಿವಾಸಿ ರಾಘವೇಂದ್ರ (41), ಉಡುಪಿ ನಿವಾಸಿ ಉದಯ ಎಸ್. ಭಂಡಾರಿ (45) ಮತ್ತು ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಚ್ಚಿಲ ನಿವಾಸಿ ಮನೋಜ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.