ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ದರ್ಶನ್ ರನ್ನು ತಾಯಿ ಮೀಬಾ ತೂಗದೀಪ, ಅಕ್ಕ ದಿವ್ಯ ಭೇಟಿಯಾಗಿ ಸಾಂತ್ವನ ಹೇಳಿದರು.
ಗುರುವಾರ ಬೆಳಗ್ಗೆ ಜೈಲಿಗೆ ಆಗಮಿಸಿದ ಮೀನಾ, ದಿವ್ಯ ಜತೆಗೆ ದರ್ಶನ್ ಬಾವ ಮಂಜುನಾಥ, ಅಕ್ಕನ ಮಗ ಸೇರಿ ಐದು ಜನ ಕುಟುಂಬಸ್ಥರು ಭೇಟಿಯಾದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರ ಜತೆ ಮಾತನಾಡಿದರು. ತಾಯಿ, ಅಕ್ಕನನ್ನು ಕಂಡು ದರ್ಶನ್ ಭಾವುಕರಾದರು. ಕುಟುಂಬಸ್ಥರು ಸಹ ದರ್ಶನ್ ಸ್ಥಿತಿ ಕಂಡು ಬಾವುಕರಾದರು ಅರ್ಧ ಗಂಟೆ ಜೈಲಿನ ವಿಸಿಟರ್ಸ್ ರೂಂನಲ್ಲಿ ಪರಸ್ಪರ ಮಾತುಕತೆ ನಡೆಸಿದರು.
ಇದೇ ವೇಳೆ ದರ್ಶನ್ ಗಾಗಿ ತಂದಿದ್ದ ಬಟ್ಟೆ, ಬೇಕರಿ ತಿನಿಸುಗಳನ್ನು ದರ್ಶನ್‌ಗೆ ನೀಡಲಾಯಿತು.