ಮಕ್ಕಳ ಕಣ್ಣೆದುರೇ ಪತ್ನಿಯನ್ನು ಸಲಾಕೆಯಿಂದ ಹೊಡೆದುಕೊಂದ ಪತಿ

0
18
ಕೊಲೆ

ಬೆಳಗಾವಿ : ಕುಡಿದ ನಶೆಯಲ್ಲಿ ಪಾಪಿ ಪತಿಯೊಬ್ಬ ಮಕ್ಕಳ ಎದುರಿಗೆ ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾದ ಘಟನೆ ನಡೆದಿದೆ ಆಗಿದ್ದಾನೆ.
ಪತಿಮಹಾಶಯನೊಬ್ಬ ಮಕ್ಕಳ ಎದುರಲ್ಲೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ ನಡೆದಿದ್ದು, ಫಕೀರವ್ವ ಕಾಕಿ (36) ಕೊಲೆಯಾದ ಮಹಿಳೆ. ಯಲ್ಲಪ್ಪ ಪತ್ನಿಯನ್ನೇ ಕೊಂದ ಆರೋಪಿ. ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ಪತಿ ಯಲ್ಲಪ್ಪ, ಮಕ್ಕಳ ಕಣ್ಣೆದುರೆ ಪತ್ನಿ ಮಲಗಿದ್ದಾಗ ಸಲಾಕೆಯಿಂದ ಹೊಡೆದು ಆಕೆಯನ್ನು ಕೊಲೆಗೈದು ಬಳಿಕ ಪರಾರಿಯಾಗಿದ್ದಾನೆ. ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯಲ್ಲಪ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Previous articleಐಪಿಎಲ್‌ಗೆ ದಿನೇಶ್ ಕಾರ್ತಿಕ್ ವಿದಾಯ!
Next articleಕುಡಿಯುವ ನೀರಿನ ಪರೀಕ್ಷೆ ನಿತ್ಯವೂ ಆಗಬೇಕು